ವಿಡಿಯೋ
ತಮಿಳುನಾಡಿನ ತೆಂಕಶಿ ಜಿಲ್ಲೆಯ ಸುತ್ತಮುತ್ತ ಬೀಳುತ್ತಿರುವ ವ್ಯಾಪಕ ಮಳೆಯಿಂದಾಗಿ ಓಲ್ಡ್ ಕೌಟ್ರಾಲಂ ಜಲಪಾತದಲ್ಲಿ ಪ್ರವಾಹ ಉಂಟಾಗಿದೆ. ಜಲಪಾತದಲ್ಲಿ ಏಕಾಏಕಿ ಪ್ರವಾಹ ಉಂಟಾದ ಪ್ರವಾಸಿಗರು ದಿಕ್ಕಾಪಾಲಾಗಿ ಓಡಿದರು. ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಕೌಟ್ರಾಲಂ ಜಲಪಾತದಲ್ಲಿ ಪ್ರವಾಹದಲ್ಲಿ ಸಿಲುಕಿ ನೆಲ್ಲೈ ಮೂಲದ 17 ವರ್ಷದ ಅಶ್ವಿನ್ ಬಾಲಕ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಏತನ್ಮಧ್ಯೆ, ಪ್ರವಾಹದ ಕಾರಣ ಮೇನ್ ಫಾಲ್ಸ್, ಫೈವ್ ಫಾಲ್ಸ್ ಮತ್ತು ಓಲ್ಡ್ ಕೌಟ್ರಾಲಂ ಫಾಲ್ಸ್‌ಗಳಲ್ಲಿ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ.
Advertisement