Watch | ಲಂಡನ್'ನಲ್ಲಿ ಮಮತಾ ಭಾಷಣಕ್ಕೆ ಅಡ್ಡಿ: 'ನಾನು ಬಂಗಾಳದ ಹುಲಿ'- ದೀದಿ ಘರ್ಜನೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲಂಡನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಅಡ್ಡಿಪಡಿಸಿದ ಘಟನೆ ಗುರುವಾರ ನಡೆದಿದೆ.

ಕೆಲ್ಲಾಗ್ ಕಾಲೇಜಿನಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು, ʻಬಂಗಾಳದಲ್ಲಿ ಮಹಿಳಾ ಸಬಲೀಕರಣ ಮತ್ತು ಅದರ ಯಶಸ್ಸುʼ ವಿಚಾರದ ಬಗ್ಗೆ ಭಾಷಣ ಮಾಡುತ್ತಿದ್ದರು.

ಈ ವೇಳೆ ಘೋಷಣೆ, ಪ್ರತಿಭಟನೆಗೆ ಕ್ಯಾರೆ ಎನ್ನದ ಮಮತಾ ಅವರು, ಶಾಂತಚಿತ್ತದಿಂದ ತಮ್ಮ ಭಾಷಣವನ್ನು ಮುಂದುವರೆಸಿದರು.

ಇಲ್ಲಿ ರಾಜಕೀಯ ಮಾಡಬೇಡಿ. ಇದು ರಾಜಕೀಯ ವೇದಿಕೆಯಲ್ಲ. ನನ್ನ ರಾಜ್ಯಕ್ಕೆ ಬಂದು ನನ್ನೊಂದಿಗೆ ರಾಜಕೀಯ ಮಾಡಿ ಎಂದು ತಿರುಗೇಟು ನೀಡಿದರು. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com