ವಿಡಿಯೋ
ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಕೊರತೆ ತೀವ್ರಗೊಂಡಿದ್ದು, ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಗರದ ಹೆಬ್ಬಾಳದ ಗುಡ್ಡದಹಳ್ಳಿ ವೃತ್ತ ಮತ್ತು ನವರಂಗ್ ಸೇರಿದಂತೆ ವಿವಿಧ ಎಲ್‌ಪಿಜಿ ಬಂಕ್‌ಗಳಲ್ಲಿ ಉದ್ದದ ಸರತಿ ಸಾಲುಗಳು ಕಂಡುಬರುತ್ತಿವೆ.
ಬೆಳಗ್ಗಿನ ಜಾವ 4-6 ಗಂಟೆಗಳಿಂದಲೇ ಚಾಲಕರು ಗ್ಯಾಸ್‌ಗಾಗಿ ಕಾಯುತ್ತಿದ್ದಾರೆ. ಅನೇಕ ಗ್ಯಾಸ್ ಏಜೆನ್ಸಿಗಳು ಸ್ಟಾಕ್ ಇಲ್ಲ ಎಂದು ಬೋರ್ಡ್ ಹಾಕಿವೆ.
ಲಭ್ಯವಿರುವ ಕೆಲವು ಬಂಕ್‌ಗಳಲ್ಲೂ, ಪೂರ್ಣ ಟ್ಯಾಂಕ್ ಬದಲಾಗಿ ಪ್ರತಿ ಆಟೋಗೆ ಸೀಮಿತ ಪ್ರಮಾಣದ ಗ್ಯಾಸ್ ಮಾತ್ರ ತುಂಬಲಾಗುತ್ತಿದೆ.
ಒಂದು ವಾರದ ಸ್ಟಾಕ್ ಕೇವಲ ಒಂದು ದಿನದಲ್ಲಿ ಖಾಲಿಯಾಗುತ್ತಿದೆ ಎಂದು ಬಂಕ್ ಮಾಲೀಕರು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement