ವಿಡಿಯೋ
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬಿಡದಿ ಬಳಿ ಸ್ಥಾಪಿಸಲು ಉದ್ದೇಶಿಸಿದ್ದ ಡೇಟಾ ಸೆಂಟರ್‌ಗೆ ವಿರೋಧಿಸುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಹಳೇ ಮೈಸೂರು ಭಾಗದ ಒಕ್ಕಲಿಗರ ಶಾಪ ತಟ್ಟದೇ ಇರುವುದಿಲ್ಲ ಎಂದು ಮಳವಳ್ಳಿ ಶಾಸಕ ಗಣಿಗ ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಳೇ ಮೈಸೂರು ಭಾಗವನ್ನು ಮತ ಗಳಿಕೆ ಯಂತ್ರವಾಗಿ ದುರ್ಬಳಕೆ ಮಾಡಿಕೊಂಡಿರುವ ನೀವು, ಎಸ್.ಎಂ ಕೃಷ್ಣ ಅವರಿಗೆ ಕಾಟ ಕೊಟ್ಟಂತೆ ಡಿ.ಕೆ. ಶಿವಕುಮಾರ್‌ಗೂ ಕಾಟ ಕೊಡಲು ಮುಂದಾಗಿರುವುದು ಎಷ್ಟು ಸರಿ?
ಬಿಡದಿ ವ್ಯಾಪ್ತಿಗೆ ಬರಬೇಕಿದ್ದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿ ಪಾಲಾಯಿತು. ಸಾಫ್ಟ್‌ವೇರ್ ಉದ್ಯಮಗಳು ಎಲೆಕ್ಟ್ರಾನಿಕ್ ಸಿಟಿಯ ವಶವಾದವು. ಒಕ್ಕಲಿಗರು ಸಿಎಂ ಆಗುವುದು ನಿಮಗಿಷ್ಟವಿಲ್ಲವೇ ಎಂದು ಪ್ರಶ್ನಿಸಿದರು. ವಿಡಿಯೋ ಇಲ್ಲಿದೆ ನೋಡಿ.