ವಿಡಿಯೋ
ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸಕ್ಕೆ ಭಾರತ ಟಿ20 ತಂಡ ಪ್ರಕಟವಾಗಿದ್ದು, ಐಪಿಎಲ್ 2026ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿಗೆ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ದೊರೆತಿದೆ.
ಈ ಕುರಿತು ಭಾರತದ ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಪ್ರತಿಕ್ರಿಯೆ ನೀಡಿ, ತುಂಬಾ ಬೇಗ ಅತಿಯಾದ ನಿರೀಕ್ಷೆ ಬೇಡ ಎಂದು ಹೇಳಿದ್ದಾರೆ.
ಅನುಭವಿ ಅಂಪೈರ್ ವೀರೇಂದ್ರ ಶರ್ಮಾ ಪ್ರತಿಕ್ರಿಯಿಸಿ, ಐಪಿಎಲ್ ಅತ್ಯಂತ ಸವಾಲಿನದು; ಸೂರ್ಯವಂಶಿ ಅಲ್ಲಿ ಪ್ರದರ್ಶನ ನೀಡಲು ಸಾಧ್ಯವಾದರೆ, ಅವರು ಎಲ್ಲಿ ಬೇಕಾದರೂ ಸ್ಕೋರ್ ಮಾಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement