ವಿಡಿಯೋ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್ ಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಅಘಾತವಾಗಿದೆ.
ಪದೇ ಪದೇ ಜಾಮೀನು ಅರ್ಜಿ ಸಲ್ಲಿಸೋದು, ಅದಕ್ಕೊಂದಷ್ಟು ವಿಚಾರಣೆ, ಪ್ರಕರಣ ಮುಂದೂಡಿಕೆ ಇದೆಲ್ಲಾ ಬೇಡ್ವೇ ಬೇಡ ಇನ್ನೊಂದು ವರ್ಷದವರೆಗೆ ನೀವೂ ಜಾಮೀನು ಅರ್ಜಿ ಸಲ್ಲಿಸ್ಬೇಡಿ, ನಾವೂ ವಿಚಾರಣೆ ಮಾಡೋದಿಲ್ಲ, ಅಷ್ಟರಲ್ಲಿ ಪ್ರಕರಣದ ವಿಚಾರಣೆಯೇ ಮುಕ್ತಾಯಗೊಂಡ್ರೆ ಒಳ್ಳೆದಲ್ವಾ ಅಂತ ಕೇಳಿರೋ ಕೋರ್ಟ್, ಇಡೀ ಕೇಸನ್ನೇ ಒಂದು ವರ್ಷದೊಳಗೆ ಇತ್ಯರ್ಥಪಡಿಸಿ ಅಂತ ಸೂಚನೆ ಕೊಟ್ಟಿದೆ. ಹಾಗೇನಾದ್ರೂ ತಾನು ನೀಡಿರುವ ಗಡುವಿನಲ್ಲಿ ವಿಚಾರಣೆ ಪೂರ್ಣಗೊಳ್ಳದೇ ಇದ್ರೆ, ಆಗ ಜಾಮೀನು ಅರ್ಜಿಯನ್ನ ಪರಿಗಣಿಸ್ತೀವಿ ಅಂತಲೂ ಕೋರ್ಟ್ ಹೇಳಿದೆ.
ನೆನ್ನೆಯ ಕಲಾಪದಲ್ಲಿ ಕೋರ್ಟ್ ತೀರ್ಪಿನ ಬಗ್ಗೆ ವಕೀಲರು ಏನು ಹೇಳಿದ್ದಾರೆ ಅನ್ನೋದರ ವಿವರವಾದ ವಿಡಿಯೋ ಇಲ್ಲಿದೆ...
Advertisement