Watch | ಗುವಾಹಟಿ: ಇಂಜಿನ್ ಸಮೇತ ಆರು ಬೋಗಿಗಳು ಹಳಿತಪ್ಪಿ ಅವಘಡ!

ಅಸ್ಸಾಂನ ಕಾಮರೂಪ್ (ಮೆಟ್ರೋ) ಜಿಲ್ಲೆಯ ದಿಗಾರು ರೈಲು ನಿಲ್ದಾಣದಲ್ಲಿ ಇಂದು ಬುಧವಾರ ಬೆಳಗ್ಗೆ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್ ರೈಲಿನ ಇಂಜಿನ್ ಮತ್ತು 6 ಬೋಗಿಗಳು ಹಳಿ ತಪ್ಪಿವೆ.

ಇಂದು ಬೆಳಗ್ಗೆ ಸುಮಾರು 6.54ಕ್ಕೆ ರೈಲು ಸಂಖ್ಯೆ 13125 ಹಳಿ ತಪ್ಪಿದ್ದು, ಈಶಾನ್ಯ ಗಡಿ ರೈಲ್ವೆ (NFR) ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.

ಮತ್ತೊಂದು ರೈಲಿಗೆ ಆದ್ಯತೆ ನೀಡುವ ಸಲುವಾಗಿ ದಿಗಾರು ನಿಲ್ದಾಣದಲ್ಲಿ ರೈಲು ಒಳಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ರೈಲ್ವೆ ತಿಳಿಸಿದೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X