ವಿಡಿಯೋ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ ತಲೆಮಾರಿನ ನ್ಯಾವಿಗೇಷನ್ ಉಪಗ್ರಹ NVS-03 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಿಂದ (SDSC) ಶುಕ್ರವಾರ ರಾತ್ರಿ 11.51ಕ್ಕೆ GSLV-F18 ರಾಕೆಟ್ ಮೂಲಕ ಉಪಗ್ರಹವನ್ನು ನಭಕ್ಕೆ ಕಳುಹಿಸಲಾಯಿತು.
GSLV-F18 ರಾಕೆಟ್ 420 ಟನ್ ತೂಕದ ಉಡಾವಣಾ ಸಾಮರ್ಥ್ಯ ಹೊಂದಿದ್ದು, 2,250 ಕೆ.ಜಿ. ತೂಕದ ಉಪಗ್ರಹವನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ (GTO)ಗೆ ಸೇರಿಸಿದೆ.
ಈ ಉಡಾವಣೆಯು ಇಸ್ರೋದ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ಸರಣಿಯ 20ನೇ ಹಾರಾಟವಾಗಿದೆ. ವಿಡಿಯೋ ಇಲ್ಲಿದೆ ನೋಡಿ.