ವಿಡಿಯೋ
ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಒಂದು ದೂರದ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬರು,'ರಾಷ್ಟ್ರೀಯ ಶ್ರ ಷ್ಠ ಶಿಕ್ಷಕ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
'ಪರಿಸರ'ವನ್ನು ಬೋಧನಾ ಮಾಧ್ಯಮವನ್ನಾಗಿ ಬಳಸಿಕೊಂಡು ಶಿಕ್ಷಣ ನೀಡುವಲ್ಲಿ ತೋರಿದ ಶ್ರೇಷ್ಠತೆಗಾಗಿ ಈ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
ಕೇಂದ್ರ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಹೊಸನಗರ ತಾಲೂಕಿನ ಸಮಟಗಾರು ಗ್ರಾಮದವರಾದ ರತ್ನಕುಮಾರಿ ಎಸ್. ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ದೇಶಾದ್ಯಂತ ಈ ಗೌರವಕ್ಕೆ ಆಯ್ಕೆಯಾದ 48 ಶಿಕ್ಷಕರಲ್ಲಿ ಇವರೂ ಒಬ್ಬರು.
ಇದು ಸುಮಾರು 56 ಮಕ್ಕಳು ವ್ಯಾಸಂಗ ಮಾಡುತ್ತಿರುವ ನನ್ನ ಈ ದೂರದ ಹಳ್ಳಿಯ ಶಾಲೆಗೆ ಸಂದ ಗೌರವ ಎಂದು ರತ್ನಕುಮಾರಿ ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.