ವಿಡಿಯೋ
ಬ್ರಿಕ್ಸ್ (BRICS) ಶೃಂಗಸಭೆಗೆ ಶನಿವಾರ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, 'ಜಾಗತಿಕ ದಕ್ಷಿಣ'ವು (Global South) 'ನಿಯಮಗಳನ್ನು ರೂಪಿಸುವ ಶಕ್ತಿ'ಯಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಎರಡು ದಿನಗಳ ವಾರ್ಷಿಕ ಶೃಂಗಸಭೆಯ ಆರಂಭಿಕ ಭಾಷಣದಲ್ಲಿ ಮೋದಿ ಮಾತನಾಡಿದರು.
ಬ್ರಿಕ್ಸ್ ಜಾಗತಿಕ ವೇದಿಕೆಯಲ್ಲಿ ತನ್ನದೇ ಆದ ವಿಶಿಷ್ಟ ಗುರುತನ್ನು ಸ್ಥಾಪಿಸಿದೆ ಮತ್ತು ಈ ಒಕ್ಕೂಟವು ಯಾರ ವಿರುದ್ಧವೂ ಅಲ್ಲ ಎಂದು ಹೇಳಿದರು.
ಅವರ ಈ ಹೇಳಿಕೆಯನ್ನು ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ರವಾನಿಸಲಾದ ಸಂದೇಶವೆಂದು ಪರಿಗಣಿಸಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.