ವಿಡಿಯೋ
'ಕಾಕ್ರೋಚ್ ಜನತಾ ಪಾರ್ಟಿ' (CJP) ತಂಡವು ತನ್ನ ರಾಷ್ಟ್ರವ್ಯಾಪಿ 'ಸ್ಕೂಲ್ ಥಿಕ್ ಕರೋ' (ಶಾಲೆಗಳನ್ನು ಸುಧಾರಿಸಿ) ಅಭಿಯಾನದ ಭಾಗವಾಗಿ ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿದೆ.
ಸಿಜೆಪಿ ಸಹ ಸಂಚಾಲಕ ಅಶುತೋಷ್ ರಂಕಾ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಳೆದ ಮೂರು ದಿನಗಳಲ್ಲಿ ಬೆಂಗಳೂರಿನ ನಾಲ್ಕು ಶಾಲೆಗಳಿಗೆ ಭೇಟಿ ನೀಡಿದ್ದಾಗಿ ತಿಳಿಸಿದರು.
ಈ ವೇಳೆ ತಂಡವು, ಎಸ್‌ಐಆರ್ (SIR) ಕೆಲಸದ ಕಾರಣದಿಂದ ಶಿಕ್ಷಕರ ಗೈರುಹಾಜರಿ, ಕಳಪೆ ಮೂಲಸೌಕರ್ಯ ಮತ್ತು ಅಸಮರ್ಪಕ ಸ್ವಚ್ಛತೆ ಮುಂತಾದ ಸಮಸ್ಯೆಗಳನ್ನು ಗುರುತಿಸಿದೆ ಎಂದು ರಂಕಾ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.