ಸದ್ಗೃಹಿಣಿಯರು ಅನುಸರಿಸಬೇಕಾದ ಕೆಲವೊಂದು ರೀತಿ ನೀತಿಗಳು

ಸದ್ಗೃಹಿಣಿಯಾದವಳು ಕೆಲವೊಂದು ನೀತಿನಿಯಮಗಳನ್ನು ಪಾಲಿಸದಿದ್ದರೇ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ತಾಂಡವವಾಡುತ್ತಾಳೆ. ಮನೆಯ ಸದಸ್ಯರ ಒಳಿತಿಗಾಗಿ ಅನುಸರಿಸಬೇಕಾದ ಕೆಲವೊಂದು ಸಲಹೆಗಳು ಇಲ್ಲಿವೆ,..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮನೆಯೇ ಮಂತ್ರಾಲಯ ಎನ್ನುತ್ತಾರೆ. ಹಾಗೆ ನಾವು ವಾಸ ಮಾಡುವ ಮನೆ ದೇವಾಲಯವಿದ್ದಂತೆ ಅದನ್ನು ಸುಂದರ, ಸ್ವಚ್ಛವಾಗಿಡುವುದು ಗೃಹಿಣಿಯ ಆದ್ಯ ಕರ್ತವ್ಯ. ಇಡಿ ಮನೆಯ ಜವಾಬ್ದಾರಿ ಆ ಮನೆಯ ಒಡತಿಯದ್ದು, ಸಂಪ್ರದಾಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಪಾಲಿಸಬೇಕಾಗುತ್ತದೆ. ಮನೆಯನ್ನು ಅಚ್ಚು ಕಟ್ಟಾಗಿ ಇಡಬೇಕಾಗುತ್ತದೆ.

ಸದ್ಗೃಹಿಣಿಯಾದವಳು ಕೆಲವೊಂದು ನೀತಿನಿಯಮಗಳನ್ನು ಪಾಲಿಸದಿದ್ದರೇ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ತಾಂಡವವಾಡುತ್ತಾಳೆ. ಮನೆಯ ಸದಸ್ಯರ ಒಳಿತಿಗಾಗಿ ಅನುಸರಿಸಬೇಕಾದ ಕೆಲವೊಂದು ಸಲಹೆಗಳು ಇಲ್ಲಿವೆ,

  • ಮುಸ್ಸಂಜೆ ದೀಪ ಹೊತ್ತಿಸಿದ ಮೇಲೆ ಮನೆಯ ಕಸ ಗುಡಿಸಬೇಡಿ,
  • ರಾತ್ರಿ ಮಲಗುವ ಮುನ್ನ ಕಸ ಗುಡಿಸಿಗದರೇ ರಾತ್ರಿ ಕಸವನ್ನು ಹೊರಗೆ ಹಾಕಬೇಡಿ.
  • ಮನೆಯ ಬಾಲಿಗ ಹೊಸ್ತಿಲ ಮೇಲೆ ನಿಲ್ಲಬೇಡಿ.
  • ಸಂಜೆ ದೀಪ ಹಚ್ಚುವ ಮುನ್ನ ಮುಂದಿನ ಬಾಗಿಲು ತೆರೆದು ಹಿಂದಿನ ಬಾಗಿಲನ್ನು ಮುಚ್ಚಿ.
  • ಮೊರ ಪೊರಕೆಗಳನ್ನು ಕಾಲಿನಿಂದ ತುಳಿಯಬೇಡಿ, ಪೊರಕೆ ಲಕ್ಷ್ಮಿ ಇದ್ದಂತೆ.
  • ಮನೆ ಬಾಗಿಲ ಎದುರು ಪಾದರಕ್ಷೆಗಳನ್ನು ಬಿಡಬಾರದು.
  • ಮನೆಯ ಸಾರಿಸಿದ ಮೇಲೆ ರಂಗೋಲಿ ಹಾಕದೇ ಖಾಲಿ ಬಿಡಬಾರದು. ಇದು ಅಶುಭ ಸೂಚಕ.
  • ಮಂಗಳವಾರ ಶುಕ್ರವಾರ ಮನೆಯಲ್ಲಿ ಜಗಳವಾಡುವುದು, ಅವ್ಯಾಚ್ಯ ಶಬ್ದಗಳಿಂದ ಯಾರನ್ನೂ ಬೈಯ್ಯಬೇಡಿ.
  • ಹರಿದು ಹೋದ ಬಟ್ಟೆಯನ್ನು ಧರಿಸಬಾರದು.
  • ಕೈಕಾಲುಗಳ ಉಗುರುಗಳನ್ನು ತುಂಬಾ ಬೆಳೆಸಬಾರದು. ಮಂಗಳವಾರ ಹಾಗೂ ಶುಕ್ರವಾರ ಉಗುರು ಕತ್ತರಿಸಿಬಾರದು.
  • ಕೆದರಿದ ಜಡೆ, ಕುಂಕುಮವಿರದ ಹಣೆ, ಅರಿಶಿನ ಹಚ್ಚದ ಕೈಕಾಲುಗಳು ಮಹಿಳೆಯರಿಗೆ ಅಶುಭ ಸೂಚಕ
  • ಚಾಪೆ ಹಾಸಿಗೆ, ಸೋಫಾ,ಮೇಲೆ ಕುಳಿತು ದೇವರ ಪೂಜೆ ಮಾಡಬೇಡಿ.
  • ಮಹಿಳೆಯರು ನಡೆಯುವಾಗ ಕಾಲಿನಿಂದ  ತುಂಬಾ ಸದ್ದು ಮಾಡಬಾರದು,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com