ದೆಹಲಿಯಿಂದ ಲಂಡನ್‌ಗೆ ಕಾರಿನಲ್ಲೇ ಪ್ರಯಾಣಿಸಿದ ಸಾಹಸಿ ಮಹಿಳೆಯರು!

ಬೆಂಗಳೂರು ನಿವಾಸಿಗಳಾದ ಈ ಮೂವರು ಮಹಿಳೆಯರು 15 ವರುಷಗಳ ಹಿಂದೆ ಕಂಡ ಕನಸಾಗಿತ್ತು ಈ ಸಾಹಸ ಯಾತ್ರೆ. ಶಿಕ್ಷಕಿಯಾಗಿರುವ...
ರಶ್ಮಿ ಕೋಪ್ಪರ್ , ಡಾ. ಸೌಮ್ಯ್ ಗೋಯಲ್, ನಿಧಿ ತಿವಾರಿ
ರಶ್ಮಿ ಕೋಪ್ಪರ್ , ಡಾ. ಸೌಮ್ಯ್ ಗೋಯಲ್, ನಿಧಿ ತಿವಾರಿ
ರಶ್ಮಿ ಕೋಪ್ಪರ್ , ಡಾ. ಸೌಮ್ಯ್ ಗೋಯಲ್, ನಿಧಿ ತಿವಾರಿ- ಈ ಮೂರು ಮಹಿಳೆಯರಿಗೂ ಒಂದು ಸಾಹಸ ಯಾತ್ರೆ ಕೈಗೊಳ್ಳುವ ಕನಸಿತ್ತು. ಇದೀಗ ಆ ಕನಸು ನನಸಾಗಿದೆ.
ದೆಹಲಿಯಿಂದ ಆರಂಭಿಸಿ 17 ರಾಷ್ಟ್ರಗಳನ್ನು ಸುತ್ತುತ್ತಾ 21477 ಕಿಲೋ ಮೀಟರ್ ಸಂಚರಿಸಿದ ಆ ಯಾತ್ರೆಯ ಗಮ್ಯ ಸ್ಥಾನ ಲಂಡನ್ ಆಗಿತ್ತು. ಮ್ಯಾನ್‌ಮಾರ್, ಚೀನಾ, ಕಿರ್ಗಿಸ್ಥಾನ್, ಉಜ್ಬೇಕಿಸ್ತಾನ್, ರಷ್ಯಾ, ಫಿನ್‌ಲ್ಯಾಂಡ್, ಚೆಕ್ ಗಣರಾಜ್ಯ, ಜರ್ಮನಿ ಹೀಗೆ ಯುರೋಪ್ ಮತ್ತು ಏಷ್ಯಾದ  17 ರಾಷ್ಟ್ರಗಳನ್ನು ಮಹೀಂದ್ರ ಯುಎಸ್‌ವಿ ಸ್ಕಾರ್ಪಿಯೋ ನಲ್ಲಿ ಸುತ್ತಿ ಲಂಡನ್ ತಲುಪಿ ತಮ್ಮ ಸಾಹಸದ ಕನಸು ನನಸಾಗಿಸಿದ್ದಾರೆ.
ಬೆಂಗಳೂರು ನಿವಾಸಿಗಳಾದ ಈ ಮೂವರು ಮಹಿಳೆಯರು 15 ವರುಷಗಳ ಹಿಂದೆ ಕಂಡ ಕನಸಾಗಿತ್ತು ಈ ಸಾಹಸ ಯಾತ್ರೆ.  ಶಿಕ್ಷಕಿಯಾಗಿರುವ  ನಿಧಿ ಇವರ ನಾಯಕಿ. ಆಫ್ ರೋಡಿಂಗ್, ದೂರ ಯಾತ್ರೆಗಳ ಕ್ರೇಜ್ ಇರುವ ನೀತಿಯೇ ಈ ಕಾರು ಚಲಾಯಿಸಿ ದೇಶ ಸುತ್ತಿದ್ದು. ಸೌಮ್ಯ ಗೋಯಲ್ ಫಿಸಿಯೋಥೆರಪಿಸ್ಟ್ ಆಗಿದ್ದು, ಅಡ್ವೆಂಚರ್ ಸ್ಪೋರ್ಟ್ಸ್ ಇಷ್ಟಪಡುವ ರಶ್ಮಿ ಕೋಪ್ಪರ್  ಕೂಡಾ ಶಿಕ್ಷಕಿಯೇ. ವುಮನ್ ಬಿಯೋಂಡ್ ಬೌಂಡರೀಸ್ ಎಂದು ಈ ಸಾಹಸ ಯಾತ್ರೆಗೆ ಹೆಸರಿಡಲಾಗಿತ್ತು.
ಪ್ರತಿ ದಿನ 600 ಕಿಮಿ ದೂರ ಪ್ರಯಾಣ ಮಾಡಿ 97 ದಿನಗಳ ಕಾಲ ನಡೆದ ಈ ಸಾಹಸ ಯಾತ್ರೆ ಅಕ್ಟೋಬರ್ 2 ರಂದು ಮುಗಿದಿತ್ತು. ಭಾರತದಿಂದ ರಸ್ತೆ ಮೂಲಕ ಲಂಡನ್ ತಲುಪಿದ ಮೊದಲ ಮಹಿಳೆಯರು ಎಂಬ ಖ್ಯಾತಿಗೂ ಇವರು ಪಾತ್ರರಾದರು. 
ಮಹಿಳೆಯರ ಕನಸುಗಳಿಗೆ ಚೌಕಟ್ಟುಗಳು ಬೇಡ ಎಂಬುದನ್ನು ಈ ಯಾತ್ರೆಯ ಮೂಲಕ ಪ್ರೂವ್ ಮಾಡಿದ್ದೇವೆ ಅಂತಾರೆ ಡಾ. ಗೋಯಲ್. ಪರಿಚಿತವಲ್ಲದ ಸ್ಥಳ, ಗೊತ್ತಿಲ್ಲದ ಭಾಷೆ ಈ ಎಲ್ಲ ಅಡೆತಡೆಗಳನ್ನು ಮೀರಿ ಈ ಮೂವರು ಮಹಿಳೆಯರು ತಮ್ಮ ಕನಸುಗಳನ್ನು ಸಾಕಾರಗೊಳಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com