ಮನೆಯಲ್ಲಿರಲಿ ಪುಟ್ಟ ಕೈತೋಟ

ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಅಷ್ಟೊಂದು ದುಡ್ಡು ತೆತ್ತು ಅದನ್ನು ತರುವುದು ಮಾತ್ರವಲ್ಲ, ಅದರ ಜತೆ ರಾಸಾಯನಿಕ...
terrace gardens
terrace gardens
Updated on

ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಅಷ್ಟೊಂದು ದುಡ್ಡು ತೆತ್ತು ಅದನ್ನು ತರುವುದು ಮಾತ್ರವಲ್ಲ, ಅದರ ಜತೆ ರಾಸಾಯನಿಕ ವಸ್ತುಗಳನ್ನೂ ನಾವು ಸೇವಿಸುತ್ತಿರುತ್ತೇವೆ. ರಾಸಾಯನಿಕ ವಸ್ತು ಮುಕ್ತವಾದ ತರಕಾರಿ ಹಣ್ಣು ಹಂಪಲುಗಳನ್ನು ನಾವು ಬಯಸುವುದಾದರೇ ನಾವೇ ಕೃಷಿ ಮಾಡಬೇಕು. ಕೃಷಿ? ನಮಗೆಲ್ಲಿದೆ ಸ್ವಾಮೀ ಕೃಷಿ ಭೂಮಿ? ಎಂದು ಮರುಪ್ರಶ್ನೆಯೆಸೆಯುವ ಬದಲು ಟೆರೇಸ್ ಮೇಲೆ ಅಥವಾ ಮನೆಯ ಮುಂದೆಯೇ ಪುಟ್ಟ ಕೈತೋಟವೊಂದನ್ನು ನಿರ್ಮಿಸಿ. ಇದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?

ಕೈತೋಟದ ಖುಷಿ

ಕೈತೋಟ ಮಾಡಲು ಎಕರೆಗಟ್ಟಲೆ ಭೂಮಿ ಬೇಡ. ನಿಮ್ಮ ಮನೆಯ ಮುಂ ದೆಯೇ ಒಂದಷ್ಟು ಗಿಡಗಳನ್ನು ನೆಟ್ಟರೆ ಸಾಕು. ಮನೆಯ ಹಿಂಭಾಗದಲ್ಲಿ ಜಾಗವಿದ್ದರೆ ಅಲ್ಲಿಯೂ ತರಕಾರಿ
ಬೆಳುಬಹುದು. ಇನ್ನು ಎಲ್ಲಿಯೂ ಜಾಗವಿಲ್ಲ ಎಂದಾದರೆ ಟೆರೆಸ್ ಮೇಲೆ ಕುಂಡಗಳಲ್ಲಿಯೇ ಗಿಡಗಳನ್ನು ಬೆಳೆಸಬಹುದು.

ಒತ್ತಡ ಕಡಿಮೆ ಮಾಡುತ್ತದೆ

ಗಿಡಮರಗಳ ಆರೈಕೆ ಮಾಡಿದರೆ ಮಾನಸಿಕ ಉಲ್ಲಾಸ ಸಿಗುತ್ತದೆ. ಅವುಗಳಿಗೆ ನೀರು, ಗೊಬ್ಬರ ಹಾಕುವುದು. ಅವು ಬೆಳೆದಂತೆ ಅದನ್ನು ನೋಡಿ ಖುಷಿ ಪಡುವುದು. ಹೂವು ಹಣ್ಣು ಬಿಟ್ಟಾಗ ನಾವು ನೆಟ್ಟ ಗಿಡದಲ್ಲಿ ಫಲ ಬಂತು ಎಂಬ ನೆಮ್ಮದಿ. ಕೃಷಿ ನಮ್ಮ ಹವ್ಯಾಸವಾಗಿಬಿಟ್ಟರೆ ಅದು ನೀಡುವಷ್ಟು ಸಂತೃಪ್ತಿ ಬೇರೊಂದಿಲ್ಲ. ಗಿಡ ಮರಗಳ ಒಡನಾಟ ಏಕಾಂತವನ್ನು ದೂರ ಮಾಡುವುದಲ್ಲದೆ ನಮ್ಮಲ್ಲಿನ ಏಕತಾನತೆಯನ್ನೂ ಹೋಗಲಾಡಿಸುತ್ತದೆ.

ಕುಟುಂಬದವರೊಂದಿಗೆ ಚಟುವಟಿಕೆ
ಮನೆಯಲ್ಲಿ ನೀವೊಬ್ಬರೇ ಈ ಕೆಲಸ ಮಾಡಬೇಕೆಂದಿಲ್ಲ. ಮನೆಯಲ್ಲಿ ಮಕ್ಕಳಿಗೆ ಬಿಡುವಿರುವಾಗ ಅವರನ್ನೂ ಕೆಲಸ ಮಾಡಲು ಬಿಡಿ. ತರಕಾರಿ ಬೆಳೆಸುವ ಖುಷಿ ಅವರಿಗೂ ದಕ್ಕಲಿ.

ಹಣ ಉಳಿತಾಯ
ಮನೆಗೆ ಬೇಕಾಗುವ ತರಕಾರಿಗಳು ನಮ್ಮ ಕೈತೋಟದಲ್ಲಿಯೇ ಸಿಕ್ಕಿದರೆ ಹಣವೂ ಉಳಿತಾಯ. ಹರಿವೆ, ಬಸಳೆ, ಬೆಂಡೆಕಾಯಿ, ಅಲಸಂಡೆ ಮೊದಲಾದ ತರಕಾರಿಗಳನ್ನು ಸುಲಭವಾಗಿ ಬೆಳೆಯಬಹುದು.

ಮನೆಯಲ್ಲೇ ಬೆಳೆಸಿ ಔಷಧಿ ಗಿಡಗಳು
ದೊಡ್ಡಪತ್ರೆ, ಒಂದಲೆಗ, ಲೋಳೆಸರ, ಅರಶಿನ, ತುಳಸಿಮೊದಲಾದ ಔಷಧೀಯ  ಗಿಡ ಮೂಲಿಕೆಗಳು ಮನೆಯ ತೋಟದಲ್ಲಿದ್ದರೆ ಚೆನ್ನ.

ಹಸಿರು ಹಸಿರು...

ಮನೆಯ ಸುತ್ತಲೂ ಹಸಿರಿನಿಂದ ಕೂಡಿದ್ದರೆ ತಂಪಿನ ವಾತಾವರಣ ಸಿಗುತ್ತದೆ. ಉಸಿರಾಡಲು ಶುದ್ಧ ಗಾಳಿ ಹಾಗು ಗಿಡಮರಗಳಿಂದಾಗಿ ಜೀವನೋತ್ಸಾಹವೂ ತುಂಬುತ್ತದೆ.

-ಅಂಜಲಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com