ತಾಯ್ತನದ ಸಂದರ್ಭ ಗರ್ಭಿಣಿಯ ಮೆದುಳಿನಲ್ಲಿ ಬದಲಾವಣೆಗಳು: ಅಧ್ಯಯನ

ಮಹಿಳೆಯರು ಗರ್ಭ ಧರಿಸಿ ತಾಯ್ತನಕ್ಕೆ ಅಡಿಯಿಡುವ ಗಳಿಗೆಯಿಂದ ಮಾನಸಿಕವಾಗಿ ಬದಲಾಗುತ್ತಾರೆ. ಹಾರ್ಮೋನ್ ಗಳ ಬದಲಾವಣೆಯಿಂದ ಈ ರೀತಿ ಆಗುತ್ತದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್:''ಅವಳಿಗೆ ಮಗು ಹುಟ್ಟಿದ್ಮೇಲೆ ಬದಲಾಗಿದ್ದಾಳೆ, ಗರ್ಭಿಣಿಯಾದ ಕೂಡ್ಲೇ ಅವಳು ಯೋಚಿಸೋ ರೀತಿ ಬದಲಾಯ್ತು. ಮಗು ಹುಟ್ಟಿದ್ಮೇಲಂತೂ ಸಿಕ್ಕಾಪಟ್ಟೆ ಚೇಂಜ್ ಆಗಿದ್ದಾಳೆ'' ಅಂತ ಮಾತಾಡೋದನ್ನ ನೀವು ಕೇಳಿರ್ತೀರಿ.

ಇದು ವೈಜ್ಞಾನಿಕವಾಗಿ ಸತ್ಯ ಅಂತ ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಡಾ.ಲೀಸಾ ಗಲಿಯಾ ಅವರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

 ಮಹಿಳೆಯರು ಗರ್ಭ ಧರಿಸಿ ತಾಯ್ತನಕ್ಕೆ ಅಡಿಯಿಡುವ ಗಳಿಗೆಯಿಂದ ಮಾನಸಿಕವಾಗಿ ಬದಲಾಗುತ್ತಾರೆ. ಹಾರ್ಮೋನ್ ಗಳ ಬದಲಾವಣೆಯಿಂದ ಈ ರೀತಿ ಆಗುತ್ತದೆ ಎನ್ನುತ್ತಾರೆ ಅವರು.

ಹಾರ್ಮೋನ್ ಗಳು ಮನಸ್ಸು ಮತ್ತು ಗರ್ಭಧಾರಣೆ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಗರ್ಭಧಾರಣೆ ಮಹಿಳೆಯರ ಜೀವನವನ್ನು ಬದಲಾಯಿಸುವ ಒಂದು ಪ್ರಮುಖ ಘಟ್ಟ. ಮಹಿಳೆಯರಲ್ಲಿ ಹೆರಿಗೆ ನಂತರ ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳು ಕಂಡುಬಂದರೆ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಲೀಸಾ ಹೇಳುತ್ತಾರೆ.

9 ನೇ ವಾರ್ಷಿಕ ಕೆನಡಿಯನ್ ನ್ಯೂರೋಸೈನ್ಸ್ ಮೀಟಿಂಗ್ ನಲ್ಲಿ ಸಂಶೋಧನೆಯ ವರದಿಯನ್ನು ಅವರು ಮಂಡಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com