ಚಿನ್ನ ಶುಭ್ರವಾಗಿದ್ದರೆ ಚೆನ್ನ

ಹೆಂಗಳೆಯರು ಆಭರಣ ಖರೀದಿಸಿ ಬಿಟ್ಟರೆ ಸಾಕು. ಅದನ್ನು ಸುರಕ್ಷಿತವಾಗಿ ಡಬ್ಬಿಯಲ್ಲಿ ಹಾಕಿ ಲಾಕರ್ ಗಳಲ್ಲಿಟ್ಟು ಬಿಡುತ್ತಾರೆ. ಇನ್ನು ಕೆಲವರು ಅದನ್ನು ತೊಟ್ಟು ತಿಂಗಳು ಹಾಗೂ ವರ್ಷವಾದರೂ ತೊಳೆಯುವುದಿಲ್ಲ...
ಚಿನ್ನ ಶುಭ್ರವಾಗಿದ್ದರೆ ಚೆನ್ನ
ಚಿನ್ನ ಶುಭ್ರವಾಗಿದ್ದರೆ ಚೆನ್ನ

ಹೆಂಗಳೆಯರು ಆಭರಣ ಖರೀದಿಸಿ ಬಿಟ್ಟರೆ ಸಾಕು. ಅದನ್ನು ಸುರಕ್ಷಿತವಾಗಿ ಡಬ್ಬಿಯಲ್ಲಿ ಹಾಕಿ ಲಾಕರ್ ಗಳಲ್ಲಿಟ್ಟು ಬಿಡುತ್ತಾರೆ. ಇನ್ನು ಕೆಲವರು ಅದನ್ನು ತೊಟ್ಟು ತಿಂಗಳು ಹಾಗೂ ವರ್ಷವಾದರೂ ತೊಳೆಯುವುದಿಲ್ಲ. ನಮ್ಮ ಮುಖ ಹಾಗೂ ಕೂದಲಿನ ಆರೈಕೆಯಂತೆಯೇ ಚಿನ್ನವನ್ನು ಶುಭ್ರವಾಗಿಟ್ಟುಕೊಳ್ಳಬೇಕು. ಆಗಲೇ, ಚಿನ್ನದ ಸೌಂದರ್ಯ ನಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಚಿನ್ನದ ಆಭರಣಗಳನ್ನು ಸಂರಕ್ಷಿಸುವುದು ಬಹಳ ಅಗತ್ಯ.

ದಿನನಿತ್ಯ ಬಳಸುವ ಚಿನ್ನದ ಒಡವೆಗಳಿಗೆ ದೇಹದ ಎಣ್ಣೆ ಅಂಶ, ಸ್ನಾನ ಮಾಡುವಾಗ ಸಾಬೂನಿನ ನೊರೆ, ಹೊರಗಿನ ಧೂಳು ಸೇರಿಕೊಂಡು ಹೊಳಪು ಕಳೆದುಕೊಂಡು, ಕೊಳೆಯಾಗಿರುತ್ತದೆ. ಹಾಗಾಗಿ ಧರಿಸುವ ಒಡವೆಗಳನ್ನು ಆಗಾಗ ಶುಚಿಗೊಳಿಸಬೇಕು.

ಒಡವೆಗಳನ್ನು ಸಂರಕ್ಷಿಸುವುದು ಹೇಗೆ...?
ಒಡವೆಗಳನ್ನು ಶುಭ್ರವಾಗಿಟ್ಟುಕೊಳ್ಳಲು ಆಭರಣ ವಿನ್ಯಾಸಕಿ ಸೋನಲ್ ದಾಂಗ್ ಅವರು ನೀಡಿರುವ ಕೆಲವು ಟಿಪ್ಸ್ ಗಳು ಇಲ್ಲಿವೆ...

ಚಿನ್ನದ ಒಡವೆಗಳ ಸಂರಕ್ಷಣೆ
ಚಿನ್ನದ ಆಭರಣಗಳನ್ನು ತೊಳೆಯುವುದು ಅತ್ಯಂತ ಕಷ್ಟಕರ ಕೆಲಸವಲ್ಲ. ಒಂದು ಬಟ್ಟಲಿನಲ್ಲಿ ಸ್ವಲ್ಪ ಸೋಪು ಹಾಗೂ ಬೆಚ್ಚಿಗಿನ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬೇಕಿದ್ದರೆ ಉತ್ತಮ ಫಲಿತಾಂಶಕ್ಕಾಗಿ ಸೋಡಾವನ್ನು ಮಿಕ್ಸ್ ಮಾಡಿಕೊಳ್ಳಬಹುದು. ಇದಕ್ಕೆ ಒಡವೆಗಳನ್ನು ಹಾಕಿ 5 ನಿಮಿಷ ಬಿಡಬೇಕು. ಇದರಿಂದ ಒಡವೆಗಳ ಮೇಲಿರುವ ಕೊಳೆ ನಿಧಾನಗತಿಯಲ್ಲಿ ಶುಭ್ರಗೊಳ್ಳುತ್ತದೆ.

ಆಭರಣ ಮುತ್ತುಗಳ ಸಂರಕ್ಷಣೆ
ಮುತ್ತುಗಳನ್ನು ತೊಳೆಯುವುದು ಅತ್ಯಂತ ಸುಲಭ. ಮುತ್ತು ತೊಳೆಯುವಾಗ ಜಾಗ್ರತೆಯಿಂದ ತೊಳೆಯಬೇಕು. ಸೋಪು ಮತ್ತು ಬೆಚ್ಚಗಿನ ನೀರನ್ನು ಮಿಶ್ರಣ ಮಾಡಿ ಇದಕ್ಕೆ ಮುತ್ತುಗಳನ್ನು ಹಾಕಿ ತೆಗೆಯಬೇಕು. ನಂತರ ಕಾಟನ್ ಬಟ್ಟೆಯ ಮೇಲೆ ಹಾಕಿ ಒಣಗಲು ಬಿಡಬೇಕು. ಇದರಿಂದ ಮುತ್ತುಗಳ ಶುಭ್ರಗೊಳ್ಳುತ್ತವೆ.

ವಜ್ರ ಹಾಗೂ ರತ್ನಗಳ ಸಂರಕ್ಷಣೆ
ಬೆಚ್ಚಿಗಿನ ನೀರಿಗೆ ಕೊಂಚ ಸೋಪು ನೀರು (ಮನೆಯಲ್ಲಿ ಬಳಸುವ ಡಿಶ್ ವಾಷರ್) ಹಾಕಿ ಮಿಶ್ರಣ ಮಾಡಿ ಇದಕ್ಕೆ ವಜ್ರ ಹಾಗೂ ರತ್ನದ ಒಡವೆಗಳನ್ನು ಹಾಕಬೇಕು. ನಂತರ ಹಲ್ಲುಜ್ಜುವ ಬ್ರಷ್ ನಿಂದ ನಿಧಾನವಾಗಿ ಉಜ್ಜಿ ನಂತರ ಮತ್ತ ಸ್ವಲ್ಪ ನೀರನ್ನು ತೆಗೆದುಕೊಂಡು ತೊಳೆದು, ಗಾಳಿಯಲ್ಲಿ ಒಣಗಲು ಬಿಡಬೇಕು.

ಸೂಕ್ಷ್ಮವಾದ ರತ್ನಗಳ ಸಂರಕ್ಷಣೆ
ಹೊಳಪು ಕಳೆದುಕೊಳ್ಳುವ ಸಾಧ್ಯತೆಗಳಿರುವುದರಿಂದ ರತ್ನಗಳನ್ನು ತೊಳೆಯುವಾಗ ರಾಸಾಯನಿಕ ವಸ್ತುಗಳ ಬಳಕೆಯನ್ನು ನಿಯಂತ್ರಿಸಬೇಕು. ಬೆಚ್ಚಗಿನ ನೀರಿನಿಂದ ತೊಳೆಯಬೇಕು ಅಥವಾ ಗ್ಲಾಸ್ ಕ್ಲೀನರ್ ನಿಂದ ತೊಳೆಯಬೇಕು. ರತ್ನವನ್ನು ಒರೆಸಲು ಟಿಶ್ಯೂ ಪೇಪರ್ ಅಥವಾ ಪೇಪರ್ ಟವಲ್ ಗಳನ್ನು ಬಳಸಬಾರದು.

ಅಮೋನಿಯಾವನ್ನು ಹೇಗೆ ಬಳಕೆ ಮಾಡಬೇಕು...?
ಅಮೋನಿಯಾ ಅತ್ಯಂತ ಪ್ರಬಲವಾದ ಕ್ಲೀನರ್ ಆಗಿ ಕೆಲಸ ಮಾಡುತ್ತದೆ. ರಾಸಾಯನಿಕ ವಸ್ತುವಾಗಿದ್ದು, ಬಳಕೆಯ ಬಗ್ಗೆ ತಿಳಿಯದಿದ್ದರೆ ಒಡವೆಗಳ ಹೊಳಪು ಹಾಳಾಗುತ್ತದೆ.

ಕೆಲವು ಚಿನ್ನದ ಆಭರಣಗಳು ತುಂಬಾ ಡೆಲಿಕೇಟೆಡ್ ಆಗಿರುತ್ತದೆ. ಎಚ್ಚರಿಕೆಯಿಂದ ಶುಭ್ರಗೊಳಿಸಬೇಕು. ಇಲ್ಲವಾದರೆ ಅದರ ಅಂದ ಹಾಳಾಗುವ ಸಾಧ್ಯತೆಗಳಿರುತ್ತದೆ. ಆಭರಣವನ್ನು ಶುಚಿಗೊಳಿಸಲು ಸಣ್ಣ ಬಟ್ಟಲಿಗೆ ಡಿಶ್ ವಾಶ್ ಡಿಟರ್ಜೆಂಟ್ ಹಾಗೂ ಬಿಸಿನೀರು ಸೇರಿಸಿ. ಅಮೋನಿಯಾವನ್ನುನೀರಿನಲ್ಲಿ ಬೆರೆಸಿ ತೊಳೆಯಬಹುದು ಎಂಬುದಾಗಿ ಸಲಹೆ ನೀಡಲಾಗುತ್ತೆ.

ಇನ್ನು ಕೆಲವು ಅಮೋನಿಯಾವನ್ನು ಬಳಬಾರದು ಎಂದು ಹೇಳುತ್ತಾರೆ. ಹಾಗಾಗಿ ಮೃದುವಾದ ಸೋಪ್ ನೀರನ್ನು ಬಳಸಿ ತೊಳೆಯುವುದು ಸೂಕ್ತವಾಗಿರುತ್ತದೆ.
ಅಮೋನಿಯಾ ಶೀಘ್ರಗತಿಯಲ್ಲಿ ಶುಭ್ರಗೊಳಿಸುತ್ತದೆ. ಆದರೆ, ಇದನ್ನು ಹೆಚ್ಚು ಬಳಕೆ ಮಾಡಬಾರದು. ಕೆಲವು ಸಮಯದಲ್ಲಿ ಮಾತ್ರ ಅಮೋನಿಯಾವನ್ನು ಹಾಕಿ ಶುಭ್ರಗೊಳಿಸಬೇಕು. ವಜ್ರವನ್ನು ಪ್ರತಿ ನಿತ್ಯ ಶುಭ್ರಗೊಳಿಸಬೇಕು. ಆಗ ಮಾತ್ರ ಅದರ ಹೊಳಪನ್ನು ಧೀರ್ಘಾಕಾಲಿಕವಾಗಿ ಕಾಪಾಡಬಹುದು. ಬಟ್ಟಲಿನಲ್ಲಿ ಅಮೋನಿಯಾ ಹಾಗೂ ನೀರು ಅಥವಾ ಸ್ವಲ್ಪ ಸೋಪನ್ನು ಹಾಕಬೇಕು. ಇದಕ್ಕೆ ಒಡವೆಯನ್ನು ಹಾಗಿ ತೊಳೆಯಬೇಕು.

ಎಲ್ಲಾ ರೀತಿಯ ಒಡವೆಗಳನ್ನು ಶುಭ್ರಗೊಳಿಸಲು ಕೆಲವು ಟಿಪ್ಸ್ ಗಳು

ಈ ಸಲಹೆ ಸ್ವಲ್ಪ ವಿಚಿತ್ರವೆಂದರೂ ಇದು ಸತ್ಯ. ಹಲ್ಲುಜ್ಜುವ ಟೂತ್ ಪೇಸ್ಟನ್ನು ಸ್ವಲ್ಪ ನೀರಿನೊಂದಿಗೆ ಮಿಶ್ರಣ ಮಾಡಬೇಕು. ಇದು ಒಡವೆಗಳನ್ನು ಶೀಘ್ರಗತಿಯನ್ನು ಶುಭ್ರಗೊಳಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com