ಗಂಡನ ಮರಣದ ನಂತರ ಹೆಂಡತಿ ಹೆಚ್ಚು ಆರೋಗ್ಯವಂತೆ: ಸಂಶೋಧನೆ

ಗಂಡನ ಮರಣಾನಂತರ ಹೆಂಡತಿ ಆರೋಗ್ಯ ವಂತಳಾಗಿರುತ್ತಾರೆ ಎಂದು ಹೊಸ ಸಂಶೋಧನೆಯ ಅಧ್ಯಯನವೊಂದು ತಿಳಿಸಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಟಲಿ:  ವಿವಾಹದಿಂದ ಪತಿ ಪತ್ನಿ ಇಬ್ಬರು ಆರೋಗ್ಯವಂತರಾಗಿರುತ್ತಾರೆ. ಹೃದಯ ಸ್ಥಂಬನ, ಕ್ಯಾನ್ಸರ್, ಮಾನಸಿಕ ಖಿನ್ನತೆಯಿಂದ ದೂರಾಗಿ ವಿವಾಹವಾದ ಜೋಡಿ ಆರೋಗ್ಯವಾಗಿರುತ್ತಾರೆ ಎಂಬುದು ಹಳೇಯ ಸಂಶೋಧನೆ.

ಆದರೆ ಹೊಸ ಸಂಶೋಧನೆಯೊಂದರ ಪ್ರಕಾರ ಗಂಡನ ಮರಣಾನಂತರ ಹೆಂಡತಿ ಆರೋಗ್ಯ ವಂತಳಾಗಿರುತ್ತಾರೆ ಎಂದು ಹೊಸ ಸಂಶೋಧನೆಯ ಅಧ್ಯಯನವೊಂದು ತಿಳಿಸಿದೆ.
ಇಟಲಿಯ ಪಡೋವಾ ವಿವಿ ನಡೆಸಿದ ಸಂಶೋಧನೆಯಲ್ಲಿ ವಿಧವೆ ಹೆಚ್ಚು ಆರೋಗ್ಯವಾಗಿರುತ್ತಾಳೆ ಎಂದು ತಿಳಿಸಿದೆ, ಗಂಡನ ಮರಣಾನಂತರ ಪತ್ನಿಗೆ, ಪತಿ ಬದುಕಿದ್ದಾಗ ಇರುವ ಮಾನಸಿಕ ಹೊರೆ ಆತನ ಸತ್ತ ನಂತರ  ಕಡಿಮೆಯಾಗುತ್ತದೆ. ಹೀಗಾಗಿ ಆಕೆ ಆರೋಗ್ಯ ವಂತಳಾಗಿರುತ್ತಾಳೆ. ಇಟಲಿಯ 733 ಪುರುಷರು ಹಾಗೂ 1.154 ಮಂದಿ ಮಹಿಳೆಯರ ಮೇಲೆ ವಿವಿ ಅಧ್ಯಯನ ತಂಡ ಸಂಶೋಧನೆ ನಡೆಸಿತ್ತು.

ಆದರೆ ಪತ್ನಿ ಮರಣಾನಂತರ ಪತಿ ಮಾನಸಿಕ ಖಿನ್ನತೆಗೊಳಗಾಗಿ ಅನಾರೋಗ್ಯ ಪೀಡಿತನಾಗುತ್ತಾನೆ. ಏಕೆಂದರೇ ಗಂಡ ಹೆಚ್ಚಿನ ಪ್ರಮಾಣದಲ್ಲಿ ಹೆಂಡತಿ ಮೇಲೆ ಅವಲಂಬಿತನಾಗಿರುತ್ತಾನೆ. ಹೆಂಡತಿ ಬದುಕಿದ್ದಾಗ ಗಂಡ ಆಕೆಯಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾನೆ. ಆದರೆ ಹೆಂಡತಿಗೆ ಸಂಸಾರದ ಹೊರೆ ಹಾಗೂ ಒತ್ತಡದಿಂದ ಹೆಚ್ಚಿನ ನಿರಾಶೆಗೊಳಗಾಗುತ್ತಾಳೆ.

ಇನ್ನು ಮಹಿಳೆ ಪುರುಷನಿಗಿಂತ ಹೆಚ್ಚು ಕಾಲ ಬದುಕುತ್ತಾಳೆ, ತನ್ನ ಜೀವಿತ ಕಾಲದಲ್ಲಿ ಸಂಸಾರದ ಹೊರೆಯಿಂದಾಗಿ, ಜೊತೆಗೆ ಗಂನ ಆರೈಕೆ ಮಾಡುವುದರಿಂದ ಆಕೆಗೆ ಹೆಚ್ಚಿನ ಮಾನಸಿಕ ಹಾಗೂ ದೈಹಿಕ ಆಯಾಸ ಉಂಟಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com