ಓದದಿದ್ದರೂ ಶ್ರಮದಿಂದಲೇ ಮೇಲೆ ಬಂದು 25 ಜನರಿಗೆ ಉದ್ಯೋಗ ನೀಡಿರುವ ಹುಲಿಯೂರುದುರ್ಗದ ಕೆಂಪಮ್ಮ!

ಜೀವನದಲ್ಲಿ ಪೆನ್ನು ಹಿಡಿಯದಿದ್ದರೂ ಶ್ರಮದಿಂದಲೇ ಮೇಲೆ ಬಂದು ಉದ್ಯಮಿಯಾಗಿರುವ ಕೆಂಪಮ್ಮ  ಕೆ ಆರ್ ಸರ್ಕಲ್ ಬಳಿ ಕ್ಯಾಂಟೀನ್  ನಡೆಸುತ್ತಾ,  25 ಜನರಿಗೆ ಕೆಲಸ ನೀಡಿದ್ದಾರೆ. ಅವರು ನೀಡುವ  ಆಹಾರ ಕೂಡಾ ಅಷ್ಟೇ ಪ್ರಸಿದ್ಧಿಯಾಗಿದೆ. 
ಉದ್ಯಮಿ ಕೆಂಪಮ್ಮ
ಉದ್ಯಮಿ ಕೆಂಪಮ್ಮ

ಬೆಂಗಳೂರು: ಜೀವನದಲ್ಲಿ ಪೆನ್ನು ಹಿಡಿಯದಿದ್ದರೂ ಶ್ರಮದಿಂದಲೇ ಮೇಲೆ ಬಂದು ಉದ್ಯಮಿಯಾಗಿರುವ ಕೆಂಪಮ್ಮ  ಕೆ ಆರ್ ಸರ್ಕಲ್ ಬಳಿ ಕ್ಯಾಂಟೀನ್  ನಡೆಸುತ್ತಾ,  25 ಜನರಿಗೆ ಕೆಲಸ ನೀಡಿದ್ದಾರೆ. ಅವರು ನೀಡುವ  ಆಹಾರ ಕೂಡಾ ಅಷ್ಟೇ ಪ್ರಸಿದ್ಧಿಯಾಗಿದೆ. 

ಪಿಡಬ್ಲ್ಯೂಡಿ ಕಚೇರಿ ಮುಂದೆ ಇರುವ ಅನ್ನಪೂರ್ಣ ಟಿಪ್ಪನ್ಸ್ ನಲ್ಲಿ ಪ್ರತಿದಿನ ಏನಿಲ್ಲವೆಂದರೂ ಕನಿಷ್ಠ 500 ಮಂದಿಗೆ ಸೂಕ್ತ ದರದಲ್ಲಿ ಆಹಾರ ನೀಡುತ್ತಾ ಬಂದಿದ್ದಾರೆ 46 ವರ್ಷದ ಕೆಂಪಮ್ಮ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರು ದುರ್ಗದ ಕೆಂಪಮ್ಮಗೆ  18 ವರ್ಷ ಇರುವಾಗಲೇ ಮದುವೆಯಾಗಿದ್ದು, ಪತಿ  ಕೆಆರ್ ಸರ್ಕಲ್ ಬಳಿ ಒಂದು ಉಪಹಾರ ಗೃಹವನ್ನುಟ್ಟುಕೊಂಡು  ಜೀವನ ನಡೆಸುತ್ತಿದ್ದರು. ಕೆಂಪಮ್ಮ ಮನೆ ಕೆಲಸದ ಜೊತೆಗೆ ಸುಂಕದಕಟ್ಟೆ ಬಳಿಯ ಮನೆ ಹತ್ತಿರ ಹೂ ಮಾರಾಟ ಮಾಡಿಕೊಂಡಿದ್ದರು.

 ಆದರೆ, ಕೆಂಪಮ್ಮ ಪುತ್ರಿಗೆ ಐದು ವರ್ಷವಿದ್ದಾಗ ಪತಿ ತೀರಿಹೋಗಿದ್ದು, ಅವರು ನಡೆಸುತ್ತಿದ್ದ ಉಪಹಾರ ಗೃಹದ ನಿರ್ವಹಣೆಯ  ಹೊಣೆಯನ್ನು ಹೊತ್ತುಕೊಳ್ಳುತ್ತಾರೆ.ಹಿರಿಯ ಮಗಳನ್ನು ಇಟ್ಟುಕೊಂಡು ತಾನೇ ಆಹಾರ ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದಾಗಿ ಹೇಳುತ್ತಾರೆ.ಅವರು ನೀಡುತ್ತಿದ್ದ ಆಹಾರ ದಿನದಿಂದ ದಿನಕ್ಕೆ ಪ್ರಸಿದ್ಧಿಯಾಗಿದ್ದು, ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೂಡಾ ಆಕೆಯ ಮನೆಯೂಟಕ್ಕೆ ಮನಸೋತು ಹೆಚ್ಚಾಗಿ ಬರಲು ಶುರು ಮಾಡಿದ್ದಾರೆ.

ಆದರೆ, ಆ ಸಂದರ್ಭದಲ್ಲೂ ಪೊಲೀಸರು ಹಾಗೂ ಕಾರ್ಪೋರೇಷನ್ ಅಧಿಕಾರಿಗಳಿಂದ ಆಕೆಗೆ ಕಿರುಕುಳ ಎದುರಾಗಿದೆ. ಒಮ್ಮೆ ಕೆಲ ಸರ್ಕಾರಿ  ನೌಕರ ಗ್ರಾಹಕರು ಹಿರಿಯ ಅಧಿಕಾರಿಗಳ ಮುಂದೆ ಕರೆದುಕೊಂಡು ಹೋಗಿ ಕಾಂಪೌಂಡ್  ಒಳಗಡೆ ಜಾಗವೊಂದನ್ನು ಒದಗಿಸಿದ್ದರು. ನಂತರ ಅಲ್ಲಿ ಕ್ಯಾಂಟೀನ್ ಆರಂಭಿಸಿದ್ದಾಗಿ  ತಮ್ಮ ಜೀವನದ ತಿರುವನ್ನು ವಿವರಿಸಿದರು.

ಪ್ರತಿದಿನ ಬೆಳಗ್ಗೆ 5 ಗಂಟೆಗೆ ಮನೆ ಬೀಡುವ ಕೆಂಪಮ್ಮ, ರಾಯಚೂರು, ಕಲಬುರಗಿ, ಕೊಪ್ಪಳ ಮತ್ತಿತರ ಕಡೆಗಳಿಂದ ಬಂದಿರುವ ಕೆಲ ಯುವಕರೊಂದಿಗೆ ಉಪಹಾರ ಹಾಗೂ ಊಟವನ್ನು ತಯಾರಿಸುತ್ತಾರೆ. ನಿಧಾನವಾಗಿ ಹೆಚ್ಚಿನ ಸಂಖ್ಯೆಯ ಜನರು ಬರಲು ಆಗಮಿಸುತ್ತಾರೆ. ಪ್ರಸ್ತುತ 25 ಮಂದಿ ಜನರು ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಪ್ರತಿ ತಿಂಗಳು ಸುಮಾರು  4 ಲಕ್ಷ ಹಣವನ್ನು ಪಾವತಿಸುತ್ತೇನೆ. 20 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಾ ಬಂದಿರುವುದಾಗಿ ಕೆಂಪಮ್ಮ ಹೇಳುತ್ತಾರೆ. 

ಪುತ್ರಿ ಸ್ನಾತಕೋತ್ತರ ಪದವಿ ಮಾಡಿದ್ದರೂ ಸಹಾಯ ಮಾಡಲು ಇಲ್ಲಿಗೆ ಬರುತ್ತಾರೆ. ಒಬ್ಬಳೆ ವಾಸಿಸುತ್ತಿದ್ದು, ಕ್ಯಾಂಟೀನ್ ಬಾಡಿಗೆ , ಸಿಬ್ಬಂದಿಗೆ ವೇತನ ಪಾವತಿಸಿದ ನಂತರ ಹೆಚ್ಚು ಉಳಿಸಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಹಣದ ಅಗತ್ಯವೂ ಇಲ್ಲ. ತಮ್ಮ ಪುತ್ರಿ ಮದುವೆಯಾಗಿದ್ದು, ಸುಖವಾಗಿದ್ದಾರೆ. ಮನೆಯೊಂದಿದೆ. ಇತರ ಬೇರೆ ರೀತಿಯ ಆಸ್ತಿ ಏನೂ ಬೇಡ. ಆದರೆ, ಅನೇಕ ಮಂದಿಗೆ ಉದ್ಯೋಗ ನೀಡಿರುವುದಕ್ಕೆ ಖುಷಿಯಾಗುತ್ತಿದೆ ಎನ್ನುತ್ತಾರೆ ಕೆಂಪಮ್ಮ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com