
ದೇಶಕ್ಕಾಗಿ ಹೋರಾಡಿದಮಹಿಳೆಯನ್ನು ವೀರ ವನಿತೆ ಎನ್ನ ಬಹುದಾದರೆ, ೫ ದಶಕಗಳ ಹಿಂದೆ ತನ್ನ ಅಳಿವು ಉಳಿವಿಗಾಗಿಹೋರಾಡಿದ ನನ್ನ ಅಜ್ಜಿಯನ್ನು ಏನೆಂದು ಕರಿಯಲಿ ? ಅವ್ರಿಗೆ ಈಗ ೮೦ ವರ್ಷಆದರು ಇನ್ನು ೧೮ ರ ಹರೆಯದ ಯುವತಿಯ ಜೀವನೋತ್ಸಾಹವಿದೆ!... ಅವರು ಆಗಿನ ಕಾಲದಲ್ಲೇ ಸರ್ಕಾರಿ ನೌಕರಿಯಲ್ಲಿದರು.ಆರ್ಥಿಕವಾಗಿಯೂ, ಮಾನಸಿಕವಾಗಿಯೂ, ದೈಹಿಕವಾಗಿಯೂ ಅವರು ತುಂಬಾನೇಸಬಲೆ... ಇಷ್ಟೇ ಆಗಿದ್ದರೆ ನನಗೆ ಅವ್ರು ಸ್ಫೂರ್ತಿಯಾಗಿರತ್ತಿರಲಿಲ್ಲ,
ಆದರೆ ಅವರು ಆ ಕಾಲಕ್ಕೇ ಒಬ್ಬ ಪೋಷಕಿಯಾಗಿಅಂದ್ರೆ singleparent ಆಗಿನಮ್ಮ ತಂದೆಯವರನ್ನುಸಾಕಿದ್ದು ನಿಜಕ್ಕೂ ಗ್ರೇಟ್ ಅನ್ನಿಸುತ್ತದೆ, ನನ್ನ ತಂದೆಯವರನ್ನುಯಾವ ಕುಂದು ಕೊರತೆಯಿಲ್ಲದಂತೆ ಸಾಕಿದ್ದಾರೆ,ನನ್ನ ತಂದೆ ಓದಿದ್ದಿಲ್ಲಾ ಕಾನ್ವೆಂಟ್ನಲ್ಲೇ ಹಾಗು ಎಲ್ಲವೂ ಮೆರಿಟ್ ಸೀಟ್ ಗಳೇ!ಈಗ ನನ್ನ ತಂದೆಯು ಕೂಡ ಓರ್ವ ವ್ಯೆದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ... ಆಗಿನ ಕಾಲಕ್ಕೆಬಿಟ್ಟು ಹೋದ ಗಂಡನ ಹಂಗಿಲ್ಲದೆ ಅಷ್ಟೇ ಯಾಕೆ ಯಾರ ಹಂಗು ಇಲ್ಲದೆ ತನ್ನ ಮಗನನ್ನು ಸಾಕಿದ ಆ ಮಹಾತಾಯಿಗೆನಾನು ಈ ವರ್ಷದ ಮಹಿಳಾ ದಿನಾಚರಣೆಯನ್ನು ಅರ್ಪಿಸುತ್ತೇನೆ... ನನ್ನ ಅಜ್ಜಿ ಆಗಿನ ಮೆಟ್ರಿಕ್ ಪಾಸುಮಾಡಿದ್ದರು ಜೊತೆಗೆ ಶಾರ್ಟ್ ಹ್ಯಾಂಡ್ ಮತ್ತು ಟೈಪಿಂಗ್ ಕಲಿತಿದ್ದರು.
ಹಾಗಾಗಿ ಅವರಿಗೆ ಮಹಿಳಾ ಮತ್ತು ಕಲ್ಯಾಣ ಇಲಾಖೆಯಲ್ಲಿ ಸ್ಟೆನೋಗ್ರಾಫೇರ್ಕೆಲಸ ಸಿಕ್ಕಿತು. ತನ್ನ ವಿದ್ಯಾಭ್ಯಾಸವನ್ನು ಅವರು ನಿಲ್ಲಿಸಲಿಲ್ಲ, ಬೆಳಿಗ್ಗೆಆಫೀಸಿನಲ್ಲಿ ಕೆಲಸ ಮಾಡಿ, ಸಂಜೆ ಕಾಲೇಜಿಗೆ ಹೋಗಿ ಬಿ.ಎ ಪದವಿ ಪಡೆದು ಮುಂದೆ ಸೂಪರಿಂಟೆಂಡೆಂಟ್, ಡೆಪ್ಯುಟಿ ಡೈರೆಕ್ಟರ್ ಹಾಗು ಕೊನೆಗೆ ಡೈರೆಕ್ಟರ್ ಆಗಿ ೧೬ ವರ್ಷಗಳ ಹಿಂದೆ ನಿವೃತ್ತಿ ಪಡೆದರು.
ತನ್ನತನಕ್ಕೆ ಯಾವಧಕ್ಕೆಯೂ ಬಾರದಂತೆ ಬದುಕಿ ತೋರಿದವರು ನಮ್ಮ ಅಜ್ಜಿ, ನನ್ನ ಎಲ್ಲ ಸಾಧನೆಗಳಿಗೂ ನನ್ನ ಅಜ್ಜಿಯೇಕಾರಣ, ಸ್ಪೂರ್ತಿ. ಇಂದಿಗೂ ಅವರೊಡನೆ ಕೆಲಸ ಮಾಡಿದವರೆಲ್ಲ ಅವರನ್ನು "ಹೆಣ್ಣು ಹುಲಿ"ಎಂದೇ ಕರೆಯುತ್ತಾರೆ ,ಒಬ್ಬೊಬ್ಬರೇ ಜೀಪಿನಲ್ಲಿ ಇನ್ಸಪೆಕ್ಷನ್ ಗೆ ಹೋಗ್ತಿದ್ರಂತೆ.ಎಷ್ಟೋ ಬಾಲಕಾರ್ಮಿಕರನ್ನು ,ಬಾಲ್ಯವಿವಾಹವನ್ನು ಒಂಟಿಯಾಗಿಯೇ ತಡೆದು ಧೈರ್ಯಮೆರದವರು ನನ್ನ ಅಜ್ಜಿ...
ಕತ್ತಲು ಇದ್ದರೇಬೆಳಕು
ಕಷ್ಟ ಇದ್ದರೇ ಸುಖ
ಅಳು ಇದ್ದರೇ ನಗು
-ಯಶಸ್ವಿನಿಶ್ರೀನಿವಾಸ್
Advertisement