
ಅಮ್ಮ ಅಮ್ಮ ಅನ್ನೋಮಾತು ಬಂತು ಎಲ್ಲಿಂದ?
ಭೂಮಿಗೆ ಬಂದ ಮೊದಲಕಂದನ ಅಳುವ ತುಟಿಯಿಂದ
ಅಮ್ಮನನ್ನು ನೆನೆದಾಗೆಲ್ಲ(ನೆನೆಯುವುದೇನು ಬಂತು ಸದಾ ನನ್ನಲ್ಲಿಯೇ ಇದ್ದಾರೆ) ಈ ಹಾಡು ನೆನಪಿಗೆ ಬರುತ್ತದೆ. ನಾನು ಕೂಡ ಒಂದುಮಗುವಿಗೆ ಅಮ್ಮನಾಗಿದ್ದರು,ನನಗೆ ನನ್ನ ಅಮ್ಮನೇ ದೇವರು.
ನಾನು ಹೆಜ್ಜೆ ಇಡುವಹಾದಿಯಲ್ಲಿ ತಾ ಹೆಜ್ಜೆ ಇಟ್ಟು ಕಲ್ಲು ಮುಳ್ಳುಗಳು ಇದ್ದರೇ ಅದನ್ನು ತೆಗೆದು ಹಾಕಿ ನನ್ನ ಪಾದಗಳಿಗೆನೋವಾಗಬಾರದು ಎನ್ನುತ ಕಾಳಜಿ ಹೊಂದಿದ್ದವರು ನನ್ನ ಅಮ್ಮ. ಕಷ್ಟಗಳು ಏನೇ ಇದ್ದರೂ ಅದನ್ನು ತನ್ನ ಮಡಿಲಿಗೆ ಹಾಕಿಕೊಂಡು, ಆ ಹರಿದಜೋಳಿಗೆಯಿಂದ ಪ್ರೀತಿಯ ತುತ್ತನ್ನು ಮುತ್ತನ್ನು ಕೊಟ್ಟು ಬೆಳೆಸಿದ ನನ್ನ ಅಮ್ಮ ಇಂದು ಬರಿ ನೆನಪಾಗಿಉಳಿದಿದ್ದಾರೆ.
ತನ್ನ ಮನೆಯ ಎರಡುಕಂಗಳು "ಸೌಮ್ಯ"ವಾಗಿ ಮತ್ತು "ದಿವ್ಯ"ವಾಗಿ ಹರನ "ಪ್ರಸಾದ"ದಆಶೀರ್ವಾದದಲ್ಲಿ "ಗಿರಿ"ಯಂಥಹ ಕಷ್ಟಗಳು ಇದ್ದರೂ, ಆ ಕಷ್ಟಗಳಿಗೆ "ಜಾ ಜಾ"ಎನ್ನುತ್ತಾ ಗಿರಿಜಮ್ಮನಾದರು.
ನನಗೆ ಕೊಂಚ ಗೊಂದಲಉಂಟಾದರೂ ಅಮ್ಮನನ್ನು ನೆನೆಸಿಕೊಂಡರೆ ಸಾಕು ಆ ಗೊಂದಲಗಳು ರವಿಯನ್ನು ಕಂಡ ಮಂಜಿನಂತೆ ಕಾಣದಾಗುತ್ತದೆ.ಇಂದು ನನ್ನ ಸಾಧನೆ ಏಳಿಗೆ ಏನೇ ಇದ್ದರೂ ಅದು ಅಮ್ಮನ ಕಾಣಿಕೆ..
ಅದಕ್ಕೆ ನನಗೆ ದೇವರುಬಂದು ಏನು ವರ ಬೇಕು ಎಂದು ಕೇಳಿದರೆ ಇದೆ ತಾಯಿ ನನಗೆ ಎಲ್ಲಾ ಜನ್ಮಕ್ಕೂ ತಾಯಿ ದೇವರಾಗಿ ಬರಲಿ ಅಂದುಕೇಳುವೆ.
ಅಮ್ಮ ನೀನೆ ನನ್ನದೇವರು!!!
-ಸೌಮ್ಯಹೆಗ್ಗಡೆ
Advertisement