ನನ್ನವ್ವನೇ ಪ್ರೇರಣೆ

ಹೆಚ್ಚು ಓದಿಕೊಂಡವಳಲ್ಲ. ಆದರೆ ದಡ್ಡಿಯಲ್ಲ. ಕಲಿತದ್ದು ಏಳರವರೆಗಾದರೂ ಕನ್ನಡ ಪದವಿ ಗಳಿಸಿದವರೂ ನಾಚುವಂತೆ ಕನ್ನಡ ಮಾತನಾಡಬಲ್ಲಳು, ಬರೆಯಬಲ್ಲಳು..
ನನ್ನವ್ವನೇ ಪ್ರೇರಣೆ
Updated on

ಅಮ್ಮನ ಕೈ

ಮೊದಲು ತೊದಲುವಾಗ

ಅಮ್ಮ ಒಬ್ಬಳೇ ಕೈತಟ್ಟಿದ್ದಳು!!

ಇಂದು ಹಾಡುವ ಮುನ್ನವೇ,

ಸಾವಿರ ಕೈಗಳ,

ಚಪ್ಪಾಳೆ ಕೇಳಿಸುತ್ತದೆ!

ಅಮ್ಮನ ಕೈ ಮಾತ್ರ, 

ಕಣ್ಣೊರೆಸಿಕೊಳ್ಳುತ್ತದೆ!!

ಅಮ್ಮ.........

ಹೆಚ್ಚು ಓದಿಕೊಂಡವಳಲ್ಲ.ಆದರೆ ದಡ್ಡಿಯಲ್ಲ. ಕಲಿತದ್ದು ಏಳರವರೆಗಾದರೂ ಕನ್ನಡ ಪದವಿ ಗಳಿಸಿದವರೂ ನಾಚುವಂತೆ ಕನ್ನಡ ಮಾತನಾಡಬಲ್ಲಳು, ಬರೆಯಬಲ್ಲಳು.ಅವಳು ಕಲಿಯುವಾಗ ರೇಡಿಯೋ, ಟಿವಿಗಳ ನೆರಳೂ ಬಿದ್ದಿರಲಿಲ್ಲ. ಕೆಲವಂ ಬಲ್ಲವರಿಂದಎಂಬಂತೆ ತನ್ನ ತಾಯಿಯಿಂದಲೇ ಚೆಂದಗೆ ಹಾಡುವುದನ್ನು, ಕಸೂತಿ ಹಾಕುವುದನ್ನು,ಟೈಲರಿಂಗ್ ನಂತಹ ಹಲವು ವಿಷಯಗಳನ್ನು ಸ್ವಂತ ಆಸಕ್ತಿಯಿಂದಲೇ ಕಲಿತುಕೊಂಡವಳು. ಇದ್ದದ್ದುಕಡುಬಡತನವಾದರೂ ಗುಣಗಳಲ್ಲಿ ಇಂದಿಗೂ ಶ್ರೀಮಂತಳು. ಸ್ವಾಭಿಮಾನಿ ಗುಣಗಳನ್ನು ನನಗೆ ಕಲಿಸಿದವಳು. ಯಾರೂಅರ್ಥ ಮಾಡಿಕೊಳ್ಳದ ನನ್ನ ಮನಸ್ಥಿತಿಯನ್ನು ಒಮ್ಮೆ ನೋಡುತ್ತಿದ್ದಂತೆ ಗ್ರಹಿಸಿಬಿಡಬಲ್ಲಳು.

ಹುಟ್ಟಿದ್ದು ಮಲೆನಾಡಅಂಚಿನಲ್ಲಿ. ಮದುವೆಯಾಗಿದ್ದು ಬಯಲುಸೀಮೆಯ ಮೂಲೆಯೊಂದರ ಊರಿಗೆ. ಮಾತನಾಡಲು ಅವಕಾಶಗಳಿದ್ದು ಎಂದಿಗೂಜೋರುದನಿಯಲ್ಲಿ ಮಾತ ನಾಡದವಳು. ಯಾವುದೇ ಸ್ಥಿತಿಯಲ್ಲೂ ತನ್ನ ಗಂಡನ ಮನೆಯ ಬಡತನವನ್ನು ಕಂಡು ಹಂಗಿಸದವಳು.ಇಂದಿಗೂ ಒಂದು ಸೀರೆಯನ್ನು ಸಹ ಆಕೆ ಕೇಳದೆ ಕುಟುಂಬಕ್ಕೆ ಆಧಾರವಾಗಿ ನಿಂತವಳು. ಮದುವೆಯಾದ ಹೊಸದರಲ್ಲಿಹೊಸ ವಾತಾವರಣಕ್ಕೆ ಹೊಂದಿಕೊಳ್ಳಲಾರದ ಸಂದರ್ಭದಲ್ಲೂ ಅತ್ತೆಯಿಂದ ಕಷ್ಟದ ಪರಿಸ್ಥಿತಿಯನ್ನು ಅನುಭವಿಸಿದರೂಒಂದೂ ಮಾತನಾಡಲಾರದೆ ಹಿರಿಯರೆಂಬ ಗೌರವವನ್ನು ಎಂದಿಗೂ ಬಿಡದವಳು. ಅಂತಹ ಅತ್ತೆಗೆ ಹೃದಯಾಘಾತವಾದ ಮೇಲೂಕೊಂಚವೂ ಬೇಸರಿಸದೆ ಅವರನ್ನು ಸಣ್ಣ ಮಗುವಿನಂತೆ ಆರೈಕೆ ಮಾಡುವವಳು.

ಕೆಲಸಕ್ಕೆಂದೂ ಸೋಮಾರಿತನಮಾಡದವಳು. ತನಗೆ ಹುಷಾರಿಲ್ಲದಿದ್ದಾಗಲೂ ಮನೆಯವರ ಹೊಟ್ಟೆ ತುಂಬಿದೆಯೆಂದು ಖಾತ್ರಿಯಾದ ಮೇಲಷ್ಟೇ ದಿಂಬಿಗೆತಲೆ ಕೊಡುವವಳು. ಪತಿ "ದಂಡಂ ದಶಗುಣಂ" ಸೂತ್ರದಲ್ಲಿ ಮಕ್ಕಳನ್ನು ಬೆಳೆಸಿದರೆ ಈಕೆ ಪ್ರೀತಿಯಲ್ಲೇಸರಿದಾರಿಯಲ್ಲಿ ನಡೆಯುವುದನ್ನು ಕಲಿಸಿದವಳು.

ಅಮ್ಮನೂರಿಗೆ ಹೋಗುವಾಗನನ್ನನ್ನು ಜತೆಯಲ್ಲಿ ಕರೆದೊಯ್ಯುವುದಿಲ್ಲವೆಂದು ಹೆದರಿಸಿ ಐದಾರು ದಿನಗಳಲ್ಲೇ ಕನ್ನಡದ ವರ್ಣಮಾಲೆಯನ್ನುಅಳಿಸಿ ಹೋಗದಂತೆ ಕಲಿಯುವಂತೆ ಪ್ರೇರೇಪಿಸಿದವಳು. ಪ್ರತೀ ಬಾರಿ ನಾನು ತರಗತಿಯಲ್ಲಿ ಓದುವುದರಲ್ಲಿ ಮೊದಲಿಗನಾದಾಗಪ್ರತೀ ಬಾರಿಯೂ ಹೊಸತೆಂಬಂತೆ ಖುಶಿಪಟ್ಟವಳು. ಬುದ್ಧಿ ಬರುವ ವಯೋಮಾನದಲ್ಲಿ ನಾನು ಕೇಳುತ್ತಿದ್ದ ಅಸಂಬದ್ಧಪ್ರಶ್ನೆಗಳಿಗೆ ಉಳಿದವರಂತೆ ಗದರಿ ಅಟ್ಟದೆ ಸಾವಧಾನವಾಗಿ ಅರ್ಥಮಾಡಿಸಿದವಳು.

ನಾನಿಂದು ಈ ಕಂಪ್ಯೂಟರ್ನೊಳಗೆ ಕಳೆದು ಹೋಗಿದ್ದರೂ ಸಾಹಿತ್ಯದ ರುಚಿ ಬಿಡದಿರುವುದಕ್ಕೆ ಕಾರಣ ಮನೆಯಲ್ಲಿ ಆಕೆ ತಾನೂ ಓದಿ ನನಗೂಕೊಡುತ್ತಿದ್ದ ಕಾದಂಬರಿಗಳ ಸಂಗ್ರಹ.

ತನ್ನ ಮಗ ಇಂಜಿನಿಯರಿಂಗ್ಓದಲಿ ಎಂಬ ಕಾರಣಕ್ಕೆ ಕತ್ತಿನಲ್ಲಿದ್ದ ಸರವನ್ನೂ ಕಳೆದು ಕೊಟ್ಟವಳು. ಮಗ ತಾನು ಪ್ರೀತಿಸಿದವಳೊಡನೆಮದುವೆಯಾಗಿ ಬೆಂಗಳೂರಿಗೆ ಹೊರಡುವಾಗ ಹೆಣ್ಣು ಕೊಟ್ಟ ಅವ್ವ ಅಳುವಂತೆ ಬಿಕ್ಕಿಬಿಕ್ಕಿ ಅತ್ತವಳು. ನಾನೇನೇಸಾಧಿಸಿದರೂ ಆ ಖುಶಿಯಲ್ಲಿ ತನ್ನ ಖುಶಿಯನ್ನು ಕಂಡವಳು.

ಜೀವನದ ಜತೆಗೆ ಜಿದ್ದಿಗೆಬಿದ್ದವಳಂತೆ ಅದೇನೇ ಅಡೆತಡೆಯಿದ್ದರೂ ಕೊಂಚವೂ ಧೃತಿಗೆಡದೆ ಸಂಸಾರದ ಆಧಾರಸ್ತಂಭವಾಗಿ ನಿಂತವಳು. ನನ್ನಅನೇಕ ಚುಟುಕಗಳಲ್ಲಿ ಅವಳೇ ಪಾತ್ರಧಾರಿಯಾಗಿರುತ್ತಾಳೆ. ಮಕ್ಕಳು ಹೇಗಿರಬೇಕೆಂದು ಬಹಿರಂಗವಾಗಿ ಹೇಳದೆತಾನು ಹಾಗೆಯೇ ಬದುಕುತ್ತ ನನಗೆ ಬದುಕುವ ಕಲೆಯ ಕಲಿಸಿದ ನನ್ನವ್ವ ರಾಜೇಶ್ವರಿ ನನಗೆ ಪ್ರೇರಣೆಯಲ್ಲದೆಇನ್ನೇನು?........

ಅಮ್ಮಾ........ಅಮ್ಮಾ......... ಐ ಲವ್ ಯೂ!

ಮದುವೆಯಾದಾಗಿನಿಂದ

ಅಂದದ್ದನ್ನೆಲ್ಲಅನ್ನಿಸಿಕೊಳ್ಳುತ್ತ

ಒಂದು ಸೀರೆಯನ್ನೂಕೇಳದ ನನ್ನವ್ವ

ಅಪ್ಪನ ಪಾಲಿಗಷ್ಟೇ

ಗ್ರೇಟ್ ವೈಫು!

ಜಗದ ಪಾಲಿಗೆ

ಡಮ್ & ಡೆಫ್ಫು!!

-ಸಂತೋಷ್ಕುಮಾರ್ ಎಲ್. ಎಂ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com