
ವಾಷಿಂಗ್ಟನ್: ತಂತ್ರಜ್ಞಾನ ಲೋಕದ ಬಾಸ್ ಎನಿಸಿಕೊಂಡಿರುವ ಅಮೆರಿಕದಲ್ಲಿ ಶೇ.15 ಮಂದಿ ಜನಸಂಖ್ಯೆ ಇಂಟರ್ನೆಟ್ ಬಳಸುವುದೇ ಇಲ್ಲ ಅಂದರೆ ನಂಬಲಾಗುತ್ತದೆಯೇ? ನಂಬಲೇಬೇಕು ಎಂದು ಸಮೀಕ್ಷೆಯೊಂದು ಹೇಳುತ್ತಿದೆ.
ಹೌದು ಅಷ್ಟು ಪ್ರಮಾಣದ ಮಂದಿ ಇಮೇಲ್, ಫೇಸ್‍ಬುಕ್, ಕ್ಯಾಟ್ ವಿಡಿಯೋಗಳಿಗೆ ಸಂಪೂರ್ಣ ಅಪರಿಚಿತರಾಗಿಯೇ ಉಳಿದುಕೊಂಡಿದ್ದಾರೆ. ಆದರೆ ಈ ಬಗ್ಗೆ ಅಮೆರಿಕಕ್ಕೆ ಸಂತಸವಿದೆ. ಕಾರಣ ಏನು ಗೊತ್ತೇ? 2000ನೇ ಇಸವಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಸಂಖ್ಯೆ ಶೇ.48 ಇತ್ತು. 15 ವರ್ಷಗಳಲ್ಲಿ ಇಂಟರ್ನೆಟ್ ಅನಕ್ಷರಸ್ಥರ ಸಂಖ್ಯೆ ಶೇ.33ರಷ್ಟು ಇಳಿಕೆಯಾಗಿದೆ ಎಂದು ಸಮೀಕ್ಷೆ ನಡೆಸಿರುವ ಪ್ಯೂ ರಿಸರ್ಚ್ ಸೆಂಟರ್ ತಿಳಿಸಿದೆ.
ಕಳೆದ 15 ವರ್ಷಗಳಲ್ಲಿ ಸರ್ಕಾರವೇ ಇಂಟರ್ನೆಟ್ ಬಳಕೆಯನ್ನು ಪ್ರೋತ್ಸಾಹಿಸಿ ಜಾಗೃತಿ ಮೂಡಿಸಿದ್ದರೂ ಒಂದು ವರ್ಗ ಇನ್ನಾದರೂ ಆ ಬಗ್ಗೆ ಆಸಕ್ತಿ ತೋರಿಲ್ಲ. ಅದು ತಮಗೆ ಅನಗತ್ಯ ಎಂಬ ಕಾರಣಕ್ಕೆ ದೊಡ್ಡ ಸಮೂಹ ಇಂಟರ್ನೆಟ್‍ನಿಂದ ದೂರ ಉಳಿದಿದ್ದರೆ, ಇಂಟರ್ನೆಟ್ ತಂತ್ರಜ್ಞಾನ ಕಷ್ಟ ಎಂದು ಕೆಲವರು ಭಾವಿಸಿದ್ದಾರೆ. ಇನ್ನು ಹಿರಿಯ ನಾಗರಿಕರು ತಾವು ಇದನ್ನು ಕಲಿಯುವ ವಯಸ್ಸು ಮೀರಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನೊಂದು ವರ್ಗ ಇಂಟರ್ನೆಟ್ ದುಬಾರಿ ಎಂಬ ಕಾರಣಕ್ಕೆ ಬೇಡ ಎನ್ನುತ್ತಿದ್ದಾರೆ.
Advertisement