ರಷ್ಯದ ಏರ್‍ಷೋ ವೇಳೆ ನೆಲಕ್ಕಪಳಿಸುತ್ತಿರುವ ಹೆಲಿಕಾಪ್ಟರ್ ಚಿತ್ರ
ವಿದೇಶ
ನೆಲಕ್ಕುರುಳಿದ ಹೆಲಿಕಾಪ್ಟರ್: ಒಬ್ಬನ ಸಾವು
ರಷ್ಯದ ಏರ್‍ಷೋ ವೇಳೆಯಲ್ಲಿ ನಡೆದ ಆಕಸ್ಮಿಕವೊಂದರಲ್ಲಿ ಹೆಲಿಕಾಪ್ಟರ್ ಭೂಸ್ಪರ್ಶಕ್ಕೊಳಗಾಗಿ ಸುಟ್ಟು ಭಸ್ಮವಾಗಿದ್ದು ಟೂಸೀಟರ್ ಚಾಪರ್‍ನೊಳಗಿದ್ದ ಒಬ್ಬ ವಿಗೀಡಾಗಿದ್ದರೆ ಇನ್ನೊಬ್ಬ ಗಾಯಗೊಂಡಿದ್ದಾನೆ...
ಮಾಸ್ಕೋ: ರಷ್ಯದ ಏರ್‍ಷೋ ವೇಳೆಯಲ್ಲಿ ನಡೆದ ಆಕಸ್ಮಿಕವೊಂದರಲ್ಲಿ ಹೆಲಿಕಾಪ್ಟರ್ ಭೂಸ್ಪರ್ಶಕ್ಕೊಳಗಾಗಿ ಸುಟ್ಟು ಭಸ್ಮವಾಗಿದ್ದು ಟೂಸೀಟರ್ ಚಾಪರ್‍ನೊಳಗಿದ್ದ ಒಬ್ಬ ವಿಗೀಡಾಗಿದ್ದರೆ ಇನ್ನೊಬ್ಬ ಗಾಯಗೊಂಡಿದ್ದಾನೆ.
ರಷ್ಯದ ರಕ್ಷಣಾ ಸಚಿವಾಲಯ ಈ ಮಾಹಿತಿ ದೃಢಪಡಿಸಿದೆ. ರಿಯಾಜನ್ ಪ್ರದೇಶದ ಡುಬ್ರೋವಿಚಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಏರ್‍ಷೋದಲ್ಲಿ ಎಂ-28 ಎಂಬ ಹೆಲಿಕಾಪ್ಟರ್ ಪ್ರದರ್ಶನ
ನೀಡುತ್ತಿದ್ದಾಗ, ತಾಂತ್ರಿಕ ದೋಷದಿಂದಾಗಿ ಒಂದೇ ಸಮನೆ ಸುತ್ತತೊಡಗಿ, ನಂತರ ಚಾಲಕನ ಹತೋಟಿಗೆ ಸಿಗದಂತಾಗಿ ನೆಲಕ್ಕೆ ಅಪ್ಪಳಿಸಿ, ಕ್ಷಣ ಮಾತ್ರದಲ್ಲಿ ಬೆಂಕಿಹೊತ್ತಿಕೊಂಡಿತು. ಗಾಯಗೊಂಡ ವ್ಯಕ್ತಿಯ ಆರೋಗ್ಯಸ್ಥಿತಿ ತೃಪ್ತಿಕರವಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ