ಕತಾರ್ ದೊರೆಗೆ ಅಂಚೆ ಚೀಟಿ, ನಾಣ್ಯ ಕಳುಹಿಸಿದ ಪ್ರಧಾನಿ ಮೋದಿ

ಜೂ.21ರಂದು ಆಚರಿಸಲಾದ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಬೆಂಬಲ ಸೂಚಿಸಿದಕ್ಕಾಗಿ ಕತಾರ್ ದೊರೆ ಶೇಖ್ ತಮೀಮ್ ಬಿನ್...
ಕತಾರ್ ದೊರೆ ಶೇಖ್ ತಮೀಮ್ ಬಿನ್ ಹಮಾದ್ ಅಲ್ ಥಾನಿ - ಪ್ರಧಾನಿ ಮೋದಿ
ಕತಾರ್ ದೊರೆ ಶೇಖ್ ತಮೀಮ್ ಬಿನ್ ಹಮಾದ್ ಅಲ್ ಥಾನಿ - ಪ್ರಧಾನಿ ಮೋದಿ

ದುಬೈ: ಜೂ.21ರಂದು ಆಚರಿಸಲಾದ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಬೆಂಬಲ ಸೂಚಿಸಿದಕ್ಕಾಗಿ ಕತಾರ್ ದೊರೆ ಶೇಖ್ ತಮೀಮ್ ಬಿನ್ ಹಮಾದ್ ಅಲ್ ಥಾನಿ ಅವರಿಗೆ ಪ್ರಧಾನಿ ಮೋದಿ ಕೃತಜ್ಞತಾ ಪತ್ರ, ಅಂಚೆಚೀಟಿ ಹಾಗೂ ಒಂದಷ್ಟು ನಾಣ್ಯ ಕಳುಹಿಸಿ ಕೊಟ್ಟಿದ್ದಾರೆ.

ಈ ಉಡುಗೊರೆಯನ್ನು ಕತಾರ್‍ನ ಭಾರತೀಯ ರಾಯಭಾರಿ ಸಂಜೀವ್ ಅರೋರಾ ಅಲ್ಲಿನ ವಿದೇಶಾಂಗ ಸಚಿವ ಖಾಲಿದ್ ಬಿನ್ ಮೊಹಮ್ಮದ್ ಅಲ್ ಅಟ್ಟಿಯಾಗೆ ಒಪ್ಪಿಸಿದ್ದಾರೆ. ನಾಣ್ಯ, ಅಂಚೆ ಚೀಟಿಗಳನ್ನು ವಿಶ್ವಯೋಗದ ದಿನದ ಗೌರವಾರ್ಥ ಬಿಡುಗಡೆ ಮಾಡಲಾಗಿತ್ತು.

ಅರೋರಾ ಹಾಗೂ ಅಟ್ಟಿಯಾ ಭೇಟಿ ವೇಳೆ ಭಾರತ -ಕತಾರ್ ಸಂಬಂಧವೃದಿಟಛಿಗೆ, ಗಲ್ಫ್ ನಲ್ಲಿರುವ ಭಾರತೀಯರ ಕಲ್ಯಾಣಕ್ಕೆ ಇನ್ನಷ್ಟು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com