ಚೀನಾದ ಉದ್ಯಮಿಯೊಬ್ಬರು ಒಂದೇ ದಿನ ಕಳೆದುಕೊಂಡ ಹಣ 3.6 ಬಿಲಿಯನ್‌ ಡಾಲರ್‌

ಜಾಗತಿಕ ಷೇರು ಮಾರುಕಟ್ಟೆ ಹಾಗೂ ಚೀನಾ ಮಾರುಕಟ್ಟೆ ಸೂಚ್ಯಂಕ ಪಾತಳಕ್ಕೆ ಕುಸಿದ ಪರಿಣಾಮ ಚೀನಾದ ಶ್ರೀಮಂತ ಉದ್ಯಮಿಯೊಬ್ಬರು ಒಂದೇ ದಿನದಲ್ಲಿ ಬರೋಬ್ಬರಿ...
ವಾಂಗ್‌ ಜೈನ್ಲಿನ್‌
ವಾಂಗ್‌ ಜೈನ್ಲಿನ್‌
ಬೀಜಿಂಗ್‌: ಜಾಗತಿಕ ಷೇರು ಮಾರುಕಟ್ಟೆ ಹಾಗೂ ಚೀನಾ ಮಾರುಕಟ್ಟೆ ಸೂಚ್ಯಂಕ ಪಾತಳಕ್ಕೆ ಕುಸಿದ ಪರಿಣಾಮ ಚೀನಾದ ಶ್ರೀಮಂತ ಉದ್ಯಮಿಯೊಬ್ಬರು ಒಂದೇ ದಿನದಲ್ಲಿ ಬರೋಬ್ಬರಿ 3.6 ಶತಕೋಟಿ ಡಾಲರ್‌ ಕಳೆದುಕೊಂಡಿದ್ದಾರೆ. 
ಡಲಿಯಾನ್‌ ವಾಂಡದ ಸ್ಥಾಪಕ, ಅಧ್ಯಕ್ಷ ವಾಂಗ್‌ ಜೈನ್ಲಿನ್‌ ಅವರ ಒಟ್ಟು ಆಸ್ತಿ ಮೊತ್ತದಲ್ಲಿ ಶೇ.10ರಷ್ಟನ್ನು ಸೋಮವಾರ ಕಳೆದುಕೊಂಡಿದ್ದಾರೆ
ಶಾಂಘೈ ಷೇರುಗಳು ಸೋಮವಾರ ಶೇ.8.49ಕ್ಕೆ ಕುಸಿದಿತ್ತು. 2007ರಿಂದೀಚೆಗೆ ದಿನವೊಂದರಲ್ಲಿ ಆದ ಅತಿ ದೊಡ್ಡ ಪ್ರಮಾಣದ ನಷ್ಟವಿದು. ಚೀನಾದ ಯುವಾನ್ ಕರೆನ್ಸಿಯ ತೀವ್ರ ಅಪಮೌಲ್ಯ, ಉತ್ಪಾದನೆಯ ಗಣನೀಯ ಇಳಿಕೆ ಮತ್ತು ಅರ್ಥವ್ಯವಸ್ಥೆಯ ಮಂದಗತಿ ಜಾಗತಿಕ ಷೇರು ಮಾರುಕಟ್ಟೆಯನ್ನು ಅಲುಗಾಡಿಸಿತ್ತು.
ಚೀನಾ ಅರ್ಥವ್ಯವಸ್ಥೆಯ ಬಿಕ್ಕಟ್ಟಿನ ಪರಿಣಾಮವಾಗಿ ಮುಂಬಯಿ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಸೋಮವಾರ ಕರಾಳ ದಿನವಾಗಿ ಪರಿಣಮಿಸಿದ್ದು, ಸೂಚ್ಯಂಕ ಸೆನ್ಸೆಕ್ಸ್ 1,624 ಅಂಕಗಳ ಮಹಾ ಪತನಕ್ಕೀಡಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com