
ವಾಷಿಂಗ್ಟನ್: ``ನಿಮ್ಮ ಅಣ್ವಸ್ತ್ರ ಸಾಮರ್ಥ್ಯಗಳನ್ನು ಹೆಚ್ಚಿಸುವುದಕ್ಕೆ ಕಡಿವಾಣ ಹಾಕಿ. ಅಣ್ವಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದರಿಂದ ಭಾರತ-ಪಾಕಿಸ್ತಾನದ ನಡುವಿನ ಮನಸ್ತಾಪ ಪರಿಹಾರವಾಗುವುದಿಲ್ಲ.'' ಇದು ಅಮೆರಿಕವು ಪಾಕ್ ಗೆ ನೀಡಿರುವ ಎಚ್ಚರಿಕೆ.
ವಿಶ್ವದಲ್ಲೇ ಪಾಕ್ ಅತ್ಯಂತ ವೇಗವಾಗಿ ಅಣ್ವಸ್ತ್ರ ಅಭಿವೃದ್ಧಿ ಪಡಿಸುತ್ತಿದೆ ಎಂಬ ಸುದ್ದಿ ಬಹಿರಂಗವಾದ ಬೆನ್ನಲ್ಲೇ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಜಾನ್ ಕಿರ್ಬಿ ಇಂತಹ ಎಚ್ಚರಿಕೆ ಸಂದೇಶವನ್ನು ಪಾಕ್‍ಗೆ ರವಾನಿಸಿದ್ದಾರೆ. ಇದೇ ವೇಳೆ, ಭಾರತ ಪಾಕ್ ಮಾತುಕತೆ ಮುರಿದು ಬಿದ್ದಿದ್ದಕ್ಕೆ ಭಾರತವೇ ಕಾರಣ. ಭಾರತ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆ ಯನ್ನು ಗಾಳಿಗೆ ತೂರಿತು. ಶಾಂತಿ ಮಾತುಕತೆಯ ಪ್ರಯತ್ನವನ್ನೂ ನಾಶ ಮಾಡಿತು ಎಂದು ಪಾಕ್ ಆರೋಪಿಸಿದೆ.
Advertisement