
ಇಸ್ಲಾಮಾಬಾದ್: ಪಾಕಿಸ್ತಾನ- ಅಪ್ಘಾನಿಸ್ಥಾನ ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳುವುದಕ್ಕೆ ಭಾರತ ಅಡ್ಡಿಯಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ಸಚಿವರೊಬ್ಬರು ಆರೋಪಿಸಿದ್ದಾರೆ.
ಪ್ರಸ್ತುತ ಆಂತರಿಕ ಮತ್ತು ಮಾದಕದ್ರವ್ಯ ನಿಯಂತ್ರಣ ಸೆನೆಟ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಪಾಕ್ ನ ಮಾಜಿ ಸಚಿವ ರೆಹಮಾನ್ ಮಲ್ಲಿಕ್ ಪಾಕಿಸ್ತಾನ- ಅಪ್ಘಾನಿಸ್ಥಾನದ ದ್ವಿಪಕ್ಷೀಯ ವಿಷಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಭಾರತ ಅಡ್ಡಿಯುಂಟುಮಾಡುತ್ತಿದೆ ಎಂದು ಆರೋಪ ಮಾಡಿರುವುದರ ಬಗ್ಗೆ ಡಾನ್ ಪತ್ರಿಕೆ ವರದಿ ಮಾಡಿದೆ.
ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಬೆನ್ನಲ್ಲೇ ಮಲ್ಲಿಕ್ ಈ ಹೇಳಿಕೆ ನೀಡಿದ್ದಾರೆ. ಭಾರತ ರಾ (ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್) ಹಾಗೂ ಗುಪ್ತಚರ ಇಲಾಖೆ ಬಲೂಚಿಸ್ಥಾನದಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಮಲ್ಲಿಕ್ ಆರೋಪಿಸಿದ್ದಾರೆ.
ಪಾಕಿಸ್ತಾನದ ಆಂತರಿಕ ವಿಷಯಗಳಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಿರುವ ವಿಷಯವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಚರ್ಚಿಸಲು ಸರ್ಕಾರಕ್ಕೆ ಮಲ್ಲಿಕ್ ಆಗ್ರಹಿಸಿದ್ದಾರೆ. ಶಾಂತಿಯುತ ಪಾಕಿಸ್ತಾನಕ್ಕೆ ಶಾಂತಿಯುತ ಅಪ್ಘಾನಿಸ್ಥಾನವೂ ಅಗತ್ಯವಿದೆ. ಆದರೆ ಅಪ್ಘಾನಿಸ್ಥಾನದೊಂದಿಗೆ ಪಾಕಿಸ್ತಾನ ಮಾತುಕತೆಗೆ ಸಿದ್ಧವಾದಾಗಲೆಲ್ಲ ಅಭಾರತ ಅಡ್ಡಿಯಾಗುತ್ತದೆ ಎಂದು ಮಲ್ಲಿಕ್ ಹೇಳಿದ್ದಾರೆ.
Advertisement