

ನವದೆಹಲಿ: ವಿಶ್ವಕ್ಕೆ ಮಾರಕವಾಗಿರುವ ಇಸೀಸ್ ಉಗ್ರ ಸಂಘಟನೆಗೆ ಜಾಗತಿಕ ಮಟ್ಟದಲ್ಲಿ 42 ಉಗ್ರ ಸಂಘಟನೆಗಳು ಬೆಂಬಲ ನೀಡಿವೆ.
ಇಂಡಿಪೆಂಡೆಂಟ್ ಪತ್ರಿಕೆಗೆ ಖಾಸಗಿ ಅಂಕಿಅಂಶ ಸಂಸ್ಥೆಯೊಂದು ನೀಡಿರುವ ಮಾಹಿತಿ ಪ್ರಕಾರ, 30 ಉಗ್ರ ಸಂಘಟನೆಗಳು ಇಸೀಸ್ ನ ಅಧಿಕೃತ ಅಂಗ ಸಂಸ್ಥೆಯಾಗಲು ಒಪ್ಪಿಗೆ ಸೂಚಿಸಿದ್ದರೆ 12 ಉಗ್ರ ಸಂಘಟನೆಗಳು ಬೆಂಬಲ ನೀಡುವ ವಾಗ್ದಾನ ನೀಡಿವೆ.
ಆಧುನಿಕ ಇತಿಹಾಸದಲ್ಲಿ ಇಸೀಸ್ ಉಗ್ರ ಸಂಘಟನೆ ಅತಿ ಶ್ರೀಮಂತ ಹಾಗೂ ಅತಿ ಕ್ರೂರ ಉಗ್ರ ಸಂಘಟನೆಯೆಂಬ ಕುಖ್ಯಾತಿ ಪಡೆದಿದ್ದು, ವಿದೇಶದಿಂದ ತನ್ನ ಸಂಘಟನೆಗೆ ಹೋರಾಟಗಾರರನ್ನು ಸೆಳೆಯುವುದು ಇಸೀಸ್ ನ ಪ್ರಮುಖ ಉದ್ದೇಶವಾಗಿದೆ. ಲಿಬಿಯಾದಲ್ಲಿ ಅನ್ಸರ್ ಅಲ್ ಶರಿಯಾ, ಟ್ಯುನೇಶಿಯಾದಲ್ಲಿ ಒಕ್ಬಾ ಇಬ್ನ್ ನಫಾ, ಈಜಿಪ್ಟ್ ನಲ್ಲಿ ಅನ್ಸರ್ ಬೀತ್ ಅಲ್ ಮಖ್ದೀಸ್, ಉಜ್ಬೆಕಿಸ್ತಾನದ ಇಸ್ಲಾಮಿಕ್ ಮೂಮೆಂಟ್, ಇಂಡೋನೇಷ್ಯಾದ ಅಬು ಸೈಯಫ್ ಸಂಘಟನೆಯಂತಹ ಉಗ್ರ ಗುಂಪುಗಳು ಇಸೀಸ್ ಬೆಂಬಲಿಸುತ್ತಿವೆ.