ಟೋನಿ ಅಬೊಟ್
ವಿದೇಶ
ಇಸ್ಲಾಂಗಿಂತ ಪಾಶ್ಚಿಮಾತ್ಯ ರಾಷ್ಟ್ರಗಳು ಮೇಲು: ಅಬೋಟ್
ಮುಸ್ಲಿಮರ ವಿರುದ್ಧ ಡೊನಾಲ್ಡ್ ಟ್ರಂಪ್ ಕಿಡಿ ಕಾರಿರುವ ಮಾದರಿಯಲ್ಲೇ ಆಸ್ಟ್ರೇಲಿಯಾದಿಂದ ಪೂರಕ ಹೇಳಿಕೆ ನೀಡಿರುವ ಉಚ್ಛಾಟಿತ...
ಮುಸ್ಲಿಮರ ವಿರುದ್ಧ ಡೊನಾಲ್ಡ್ ಟ್ರಂಪ್ ಕಿಡಿ ಕಾರಿರುವ ಮಾದರಿಯಲ್ಲೇ ಆಸ್ಟ್ರೇಲಿಯಾದಿಂದ ಪೂರಕ ಹೇಳಿಕೆ ನೀಡಿರುವ ಉಚ್ಛಾಟಿತ ಪ್ರಧಾನಿ ಟೋನಿ ಅಬೊಟ್, ಸಂಸ್ಕೃತಿಗಳೆಲ್ಲ ಸಮಾನವಲ್ಲ. ಇಸ್ಲಾಮ್ ಗಿಂತ ಪಾಶ್ಚಿಮಾತ್ಯ ದೇಶಗಳು ಉಚ್ಚಸ್ಥಾನದಲ್ಲಿವೆ ಎಂಬುದನ್ನು ತೋರಿಸಿಕೊಡಬೇಕು ಎಂದಿದ್ದಾರೆ.
ದೇವರ ಹೆಸರಲ್ಲಿ ಜನರನ್ನು ಕೊಲ್ಲುವ ಧರ್ಮಕ್ಕಿಂತ ನಮ್ಮ ಸಂಸ್ಕೃತಿ ಉನ್ನತ ಸ್ಥಾನದಲ್ಲಿದೆ ಎಂಬುದನ್ನು ತೋರಿಸಬೇಕಿದೆ. ಎಷ್ಟೋ ಮುಸ್ಲಿಮ್ ನಾಯಕರು ಕೂಡಾ ತಮ್ಮ ಧರ್ಮ ಈಗ ಸುಧಾರಣೆಯಾಗಬೇಕಿದೆ ಎಂಬ ಅಭಿಪ್ರಾಯ ಹೊಂದಿದ್ದಾರೆ'' ಎಂದು ಟೋನಿ ಅಬೊಟ್ ಸಿಡ್ನಿಯ ಡೈಲಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ