ಫೇಸ್‌ಬುಕ್ 2015 ವರ್ಷದ ಹಿನ್ನೋಟ ವಿಡಿಯೋದಲ್ಲಿ ಸ್ಥಾನಗಿಟ್ಟಿಸಿದ ಮೋದಿ!

ಇನ್ನೇನು 2015 ಮುಗಿಯುತ್ತಾ ಬರುತ್ತಿದ್ದಂತೆ ಈ ವರ್ಷದ ಹಿನ್ನೋಟದ ವಿಡಿಯೋವನ್ನು ಫೇಸ್‌ಬುಕ್ ಪ್ರಕಟಿಸಿದೆ...
2015 ವರ್ಷದ ಹಿನ್ನೋಟ
2015 ವರ್ಷದ ಹಿನ್ನೋಟ
Updated on: 
ವಾಷಿಂಗ್ಟನ್: ಸಾಮಾಜಿಕ ತಾಣವೇ ಹೀರೋ ಆದ ವರ್ಷವಾಗಿತ್ತು 2015. ಜಗತ್ತಿನ ನಗು, ಸಂತೋಷ, ಸುಖ, ದುಃಖಗಳನ್ನು ವ್ಯಕ್ತಪಡಿಸಲು ಫೇಸ್‌ಬುಕ್ ವೇದಿಕೆಯಾಗಿತ್ತು. ಇನ್ನೇನು 2015 ಮುಗಿಯುತ್ತಾ ಬರುತ್ತಿದ್ದಂತೆ ಈ ವರ್ಷದ ಹಿನ್ನೋಟದ ವಿಡಿಯೋವನ್ನು ಫೇಸ್‌ಬುಕ್ ಪ್ರಕಟಿಸಿದೆ.
ವಿಯೆಟ್ನಾಂನಲ್ಲಿ ಸಲಿಂಗ ವಿವಾಹಕ್ಕೆ ಅನುಮತಿ ನೀಡಿ ಎಂದು ಒತ್ತಾಯಿಸಿ ನಡೆದ ಸೈಕಲ್ ರ್ಯಾಲಿಯ ದೃಶ್ಯದ ಮೂಲಕ ಈ ವಿಡಿಯೋ ಆರಂಭವಾಗುತ್ತದೆ. ಗಡಿಯಾರ ವಿಷಯದಲ್ಲಿ ಬಂಧಿತನಾದ ಅಹಮ್ಮದ್, ಪ್ಲುಟೋದ ಚಿತ್ರಗಳು, ನಾಸಾದ ಸಾಧನೆ, ಬ್ಲಡ್ ಮೂನ್, ವಲಸೆಗಾರರು, ಅಭಯಾರ್ಥಿಗಳು, ಪ್ಯಾರಿಸ್ ದುರಂತ, ಕ್ರೀಡಾ ವಿಶೇಷಗಳು, ಮೋದಿಯವರ ಭಾಷಣ ಸೇರಿದಂತೆ ಬಾಹುಬಲಿ ಚಿತ್ರದ ಹಾಡಿನ ದೃಶ್ಯವೂ ಈ ವೀಡಿಯೋದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
2.02 ನಿಮಿಷ ಅವಧಿಯ ಈ ವೀಡಿಯೋ ಈಗಾಗಲೇ ಫೇಸ್‌ಬುಕ್‌ನಲ್ಲಿ  ವೈರಲ್ ಆಗಿದೆ. Let's stand together in 2016 ಎಂಬ ಸಂದೇಶದೊಂದಿಗೆ ವೀಡಿಯೋ ಸಮಾಪ್ತಿಗೊಳ್ಳುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com