
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ತುರ್ತು ನಿಧಿಗೆ ಭಾರತ 5 ಲಕ್ಷ ಡಾಲರ್ (ಸುಮಾರು ರು.3.25 ಕೋಟಿ) ಕೊಡುಗೆ ನೀಡಿದೆ. 2015-16ನೇ ಸಾಲಿಗೆ ಈ ಕೊಡುಗೆ ನೀಡಿದ್ದು ಮಾನವೀಯ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ನೀಡಲಾಗಿದೆ.
2014ರಲ್ಲೂ ಇಷ್ಟೇ ಹಣವನ್ನು ನೀಡಲಾಗಿತ್ತು. ಭಾರತ ಎಬೋಲಾ ನಿಧಿಗೆ 1 ಕೋಟಿ ಡಾಲರ್ ಕೊಡುಗೆ ನೀಡಿತ್ತು. ಯಮೆನ್‍ನಲ್ಲಿ ಆಂತರಿಕ ದಂಗೆ ನಡೆದಾಗ ಭಾರತೀಯರು ಸೇರಿದಂತೆ ಹಲವು ವಿದೇಶಿಯರನ್ನು ಅಲ್ಲಿಂದ ತೆರವುಗೊಳಿಸುವಲ್ಲಿ ನೆರವಾಗಿತ್ತು.
ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗಲ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು ಎಂದು ವಿಶ್ವಸಂಸ್ಥೆಯ ಭಾರತೀಯ ಮಿಷನ್‍ನ ಮೊದಲ ಕಾರ್ಯದರ್ಶಿ ಅಭಿಷೇಕ್ ಸಿಂಗ್ ಹೇಳಿದ್ದಾರೆ.
Advertisement