
ಬೀಜಿಂಗ್: ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿದ್ದರೆ ಅದೇ ದೊಡ್ಡ ವಿಷಯ. ಆದರೆ ಬೀಜಿಂಗ್ ನ ಶೌಚಾಲಯವೊಂದರಲ್ಲಿ ಎಟಿಎಂ ಯಂತ್ರವಿದೆ, ವೆಂಡರ್ ಯಂತ್ರವಿದೆ, ವೈಫೈ ಸೌಲಭ್ಯವಿದೆ. ಪರ್ಸನಲ್ ಟಿವಿ ಇದೆ. ಅಷ್ಟೇ ಅಲ್ಲ ಕಾರ್ ಚಾರ್ಜಿಂಗ್ ಸ್ಟೇಷನ್‌ಗಳೂ ಇವೆ ಇದು ಅಚ್ಚರಿ ನಿಜ.
ಫ್ಯಾಂಗ್ ಶಾನ್‌ನ ಫ್ಯೂಕಿಯಾನ್ ಸ್ಕ್ವೇರ್‌ನಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಈ ಎಲ್ಲಾ ಸೌಲಭ್ಯಗಳು ಇವೆ. ಜತೆಗೆ ಸದಾ ಇಂಪಾದ ಸಂಗೀತವೂ ಕೇಳಬಹುದು. ಶೌಚಾಲಯದ ಕಿಟಕಿಗಳಲ್ಲಿ ಸಾಲಾಗಿ ಅಲೋವೆರಾ ಗಿಡಗಳು! ಟಾಯ್ಲೆಟ್ಟಲ್ಲಿ ಇದೆಲ್ಲ ಬೇಕಾ ಅಂತೀರಾ? ಚೀನಾದಲ್ಲೂ ಹಲವರು ಹೀಗೆಯೇ ಪ್ರಶ್ನಿಸಿದ್ದಾರೆ. ಆದರೆ ಪರಿಸರ ನೈರ್ಮಲ್ಯಕ್ಕಾಗಿ ಈ ಆಕರ್ಷಣೆ ಮತ್ತು ಸೌಲಭ್ಯ ತರಲಾಗಿದೆಯಂತೆ.
ಸದ್ಯದಲ್ಲೇ ಇನ್ನೂ ೫೭ ಸಾವಿರ ಟಾಯ್ಲೆಟ್‌ಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ಚೀನಾ ಸರ್ಕಾರ ಘೋಷಿಸಿದೆ. ಚೀನಾದ ಹಿರಿಯ ನಾಗರಿಕರು, ಇದೊಂದು ವ್ಯರ್ಥ ಕಸರತ್ತು, ಟ್ಯಾಕ್ಸ್ ಹೊರೆ ಎಂದೆಲ್ಲ ದೂಷಿಸಿದ್ದರೆ, ಯುವಜನತೆ ಈ ನಡೆಯನ್ನು ಸ್ವಾಗತಿಸಿದೆ. ಗಮನಾರ್ಹ ಸಂಗತಿಯೆಂದರೆ ಈ ಎಲ್ಲ ಸೌಲಭ್ಯಗಳಿರುವುದು ಪುರುಷರ ಶೌಚಾಲಯಕ್ಕೆ ಮಾತ್ರ.
Advertisement