

ವಿಶ್ವಸಂಸ್ಥೆ: ಸಂಘರ್ಷಗ್ರಸ್ಥ ಸಿರಿಯಾದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯ ಅಂಗೀಕರಿಸಿದೆ.
ಲಕ್ಷಾಂತರ ಜನರ ಬಲಿ ಹಾಗೂ ವಲಸೆ ಮೂಲಕ ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಿರುವ ಸಿರಿಯಾದ ಆಡಳಿತ ಹಾಗೂ ಸ್ಥಳೀಯ ಬಂಡುಕೋರರ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ವಿಶ್ವದ ಮುಂಚೂಣಿ ರಾಷ್ಟ್ರಗಳ ನಾಯಕರು ಒಮ್ಮತದ ನಿರ್ಣಯಕ್ಕೆ ಬಂದಿದ್ದು, ಈ ಬೆಳವಣಿಗೆ ಮಧ್ಯಪ್ರಾಚ್ಯದ ನರಕಸದೃಶ ದೇಶಕ್ಕೆ ನೆಮ್ಮದಿ ನೀಡುವ ಭರವಸೆ ಮೂಡಿದೆ.
ಸಿರಿಯಾ ಅಧ್ಯಕ್ಷ ಬಷಾರ್ ಅಲ್ ಅಸಾದ್ ಹಾಗೂ ಆತನ ಆಡಳಿತದ ವಿರುದ್ಧ ಹೋರಾಡುತ್ತಿ ರುವ ಸ್ಥಳೀಯ ಗುಂಪುಗಳ ನಡುವೆ ಕದನ ವಿರಾಮ ಘೋಷಿಸುವುದು, ಎರಡೂ ಕಡೆಯವರ ಮುಖಾಮುಖಿ ಮೂಲಕ ಶಾಂತಿ ಮಾತುಕತೆಗೆ ಚಾಲನೆ ನೀಡುವುದು ಒಪ್ಪಂದದ ಪ್ರಮುಖ ಅಂಶಗಳಾಗಿವೆ.