ಮನುಷ್ಯನ ಸಾವು ಕೂಡ ಜಪಾನ್ ನಲ್ಲಿ ದೊಡ್ಡ ವಹಿವಾಟೇ..!

ಬದುಕಿದ್ದಾಗ ಏನು ಬೇಕೋ, ಹೇಗೆ ಬೇಕೋ ಅದನ್ನೆಲ್ಲ ಮಾಡಿಕೊಳ್ಳುತ್ತೇವೆ. ಆದರೆ, ಸತ್ತ ನಂತರ ನಮ್ಮ ಕೈಯ್ಯಲ್ಲಿ ಏನೂ ಇರುವುದಿಲ್ಲ'' ಎಂಬ ಮಾತಿದೆ...
ಜಪಾನ್ ನಲ್ಲಿರುವ ಸಾವಿನ ಕ್ರಿಯಾಧಿ ಮಾರುಕಟ್ಟೆ (ಸಂಗ್ರಹ ಚಿತ್ರ)
ಜಪಾನ್ ನಲ್ಲಿರುವ ಸಾವಿನ ಕ್ರಿಯಾಧಿ ಮಾರುಕಟ್ಟೆ (ಸಂಗ್ರಹ ಚಿತ್ರ)
Updated on: 

ಟೋಕಿಯೋ: ``ಬದುಕಿದ್ದಾಗ ಏನು ಬೇಕೋ, ಹೇಗೆ ಬೇಕೋ ಅದನ್ನೆಲ್ಲ ಮಾಡಿಕೊಳ್ಳುತ್ತೇವೆ. ಆದರೆ, ಸತ್ತ ನಂತರ ನಮ್ಮ ಕೈಯ್ಯಲ್ಲಿ ಏನೂ ಇರುವುದಿಲ್ಲ'' ಎಂಬ ಮಾತಿದೆ.

ಆದರೆ, ಈ ಮಾತು ಜಪಾನಿಯರಿಗೆ ಅನ್ವಯಿಸುವುದಿಲ್ಲ. ಏಕೆ ಎನ್ನುತ್ತೀರ? ಇಲ್ಲಿನ ಜನ ತಮ್ಮ ಸಾವಿನ ನಂತರದ ಕ್ರಿಯಾಧಿಗಳ ಬಗ್ಗೆ ಮೊದಲೇ ಯೋಜನೆ ಹಾಕಿಕೊಂಡಿರುತ್ತಾರೆ. ಮರಣೋತ್ತರ  ಕ್ರಿಯೆ ಹೇಗೆ ನಡೆಯಬೇಕು, ಚಿತಾಭಸ್ಮವನ್ನು ಏನು ಮಾಡಬೇಕು, ದೇಹವನ್ನು ಯಾವ ಪೆಟ್ಟಿಗೆಯಲ್ಲಿಡಬೇಕು, ಆ ಪೆಟ್ಟಿಗೆಗೆ ಯಾವ ಬಣ್ಣದ, ಯಾವ ವಿನ್ಯಾಸದ ತಲೆ ದಿಂಬು-ಹೊದಿಕೆ ಇರಬೇಕು  ಎಂಬಿತ್ಯಾದಿಯನ್ನು ಮೊದಲೇ ಹಣ ಕೊಟ್ಟು ಸಿದ್ಧಪಡಿಸಿಕೊಂಡು, ನಂತರ ಇಹಲೋಕ ತ್ಯಜಿಸುತ್ತಾರೆ. ಒಟ್ಟಿನಲ್ಲಿ ಜಪಾನ್ ನಲ್ಲಿ ಸಾವಿನ ವ್ಯಾಪಾರ ಭರ್ಜರಿಯಾಗಿಯೇ ನಡೆಯುತ್ತಿದೆ.

ಲೈಫ್ ಎಂಡಿಂಗ್ ಇಂಡಸ್ಟ್ರಿ ಎಕ್ಸ್ ಪೊ: ಜಪಾನ್‍ನಲ್ಲಿ 200ಕ್ಕೂ ಹೆಚ್ಚು ಕಂಪನಿಗಳು ಸೇರಿ ``ಲೈಫ್  ಎಂಡಿಂಗ್ ಇಂಡಸ್ಟ್ರಿ ಎಕ್ಸ್ ಪೊ'' ಆಯೋಜಿಸಿವೆ. ಇಲ್ಲಿ ಮೃತದೇಹಗಳಿಗೆ ಸಂಬಂಧಿಸಿದ  ವಸ್ತುಗಳೇ ಪ್ರದರ್ಶನವಾಗುತ್ತಿದೆ. ಯಾವ್ಯಾವ ಉತ್ಪನ್ನಗಳು: ಕೆಲವರು ಸತ್ತ ಬಳಿಕ ನಮ್ಮ ಚಿತಾಭಸ್ಮವಾದರೂ ಬಾಹ್ಯಾಕಾಶಕ್ಕೆ ಹೋಗಬೇಕು ಎಂದು ಬಯಸುತ್ತಾರೆ. ಅಂಥವರು ಹಣ  ನೀಡಿದರೆ, ಅವರ ಚಿತಾಭಸ್ಮವನ್ನು ರಾಕೆಟ್ ಮೂಲಕ ಹಾರಿಸಲಾಗುತ್ತದೆ. ಇದರ ಮೊತ್ತ 3,700 ಡಾಲರ್‍ನಿಂದ 21 ಸಾವಿರ ಡಾಲರ್‍ವರೆಗೂ ಇದೆ. ಡಿಲಕ್ಸ್  ಮಾಡೆಲ್(21 ಸಾವಿರ ಡಾಲರ್)ನಲ್ಲಿ  ಚಿತಾಭಸ್ಮವನ್ನು ಚಂದ್ರನಲ್ಲಿ ಬಿಡಲಾಗುತ್ತದೆ. ಇನ್ನು ಭೂಮಿಯಲ್ಲೇ ಇರ ಬಯಸುವವರ ಭಸ್ಮವನ್ನು ಹರಳಿನಲ್ಲಿಟ್ಟು ಅವರ ಕುಟುಂಬಸ್ಥರಿಗೆ ಕೊಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com