ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆರ್ಥಿಕ ಅಭಿವೃದ್ಧಿ: ಭಾರತದ ದಶಕ

ಭಾರತ ಅಂದಾಜಿತ ಶೇ.7ರಷ್ಟು ಪ್ರಗತಿ ಕಾಣುವ ಸಾಮಥ್ರ್ಯ ಹೊಂದಿದ್ದು ಇನ್ನು ಹತ್ತು ವರ್ಷ ಕಾಲ ವಿಶ್ವದ ಅಧಿಕ ಪ್ರಮಾಣದ ಆರ್ಥಿಕ...
Published on
ನ್ಯೂಯಾರ್ಕ್: ಭಾರತ ಅಂದಾಜಿತ ಶೇ.7ರಷ್ಟು ಪ್ರಗತಿ ಕಾಣುವ ಸಾಮಥ್ರ್ಯ ಹೊಂದಿದ್ದು ಇನ್ನು ಹತ್ತು ವರ್ಷ ಕಾಲ ವಿಶ್ವದ ಅಧಿಕ ಪ್ರಮಾಣದ ಆರ್ಥಿಕ ಅಭಿವೃದ್ಧಿ ಕಾಣುವ ದೇಶವಾಗಲಿದೆ ಎಂದು ಅಮೆರಿಕದ ಹಾರ್ವರ್ಡ್ ಸಂಶೋಧಕರು ಹೇಳಿದ್ದಾರೆ. 
ಅಂದಾಜಿತ ವಾರ್ಷಿಕ ಆರ್ಥಿಕ ಪ್ರಗತಿ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಹಾರ್ವರ್ಡ್ ವಿವಿಯ ಅಂತಾರಾಷ್ಟ್ರೀಯ ಅಭಿವೃದ್ಧಿ ಕೇಂದ್ರ (ಸಿಐಡಿ) ಸಂಶೋಧಕರು ಮಂಡಿಸಿರುವ ಹೊಸ ಬೆಳವಣಿಗೆ ಅಂದಾಜು ವರದಿಯಲ್ಲಿ ಹೇಳಿದ್ದಾರೆ. 
ಭಾರತ ತನ್ನ ತೆರೆಯ ದೇಶವಾದ ಚೀನಾವನ್ನು ಹಿಂದಿಕ್ಕಲಿದೆ ಎಂದು ವರದಿ ಹೇಳಿದ್ದು, ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಚೀನಾ ಆರ್ಥಿಕತೆ ಸತತವಾಗಿ ಇಳಿಮುಖ ಕಾಣಲಿದ್ದು ಶೇ.4.3ಕ್ಕೆ ಇಳಿಯಬಹುದು ಎಂದಿದೆ.
ದಕ್ಷಿಣ ಏಷ್ಯಾ ಮತ್ತು ಪೂರ್ವ ಆಫ್ರಿಕಾ ಹೆಚ್ಚಿನ ಪ್ರಗತಿ ಸಾಮಥ್ರ್ಯ ಹೊಂದಿರುವ ವಲಯಗಳಾಗಿವೆ. ತೈಲ ಉತ್ಪಾದನೆ ಮತ್ತು ಸರಕು ತಯಾರಿಕೆ ದೇಶಗಳ ಆರ್ಥಿಕ ಪ್ರಗತಿ ಇಳಿಮುಖ ಕಾಣುವುದರಿಂದ ಈ ವಲಯಗಳು ವೇಗವಾಗಿ ಅಭಿವೃದ್ಧಿ ಸಾಧಿಸಲಿವೆ ಎಂದು ಹಾರ್ವರ್ಡ್ ಕೆನಡಿ ಸ್ಕೂಲ್‍ನ ಆರ್ಥಿಕ ಅಭಿವೃದ್ಧಿ ವಿಷಯದ ಕುರಿತ ಪ್ರೊಫೆಸರ್ ರಿಕಾರ್ಡೊ ಹಾಸ್ಮನ್ ಹೇಳಿದ್ದಾರೆ. 
ಭಾರತದ ಈ ಗಳಿಕೆಗೆ ತುಂಬಾ ಸಂಕೀರ್ಣತೆಯಿಂದ ಬಂದಿದೆ. ಚೀನಾ ಈಗಾಗಲೆ ಇಂತದರ ಲಾಭ ಪಡೆದಿದೆ. ಈಗ ಭಾರತ ಪಡೆಯಲಿದೆ. ಇದರಿಂದ ಭಾರತ ಜಾಗತಿಕ ಆರ್ಥಿಕತೆ ಮುನ್ನಡೆಸುವ ಸ್ಥಾನಕ್ಕೆ ಬರಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com