12 ಸಾವಿರ ಮಹಿಳೆಯರ ಜೊತೆಯಲ್ಲಿ ಕಾಮಕೇಳಿ!

ಜಗತ್ತು ಕಂಡ ಅತ್ಯಂತ ಅಸಹ್ಯಕರ ವಿಕೃತಕಾಮಿಯೊಬ್ಬನ ಸುದ್ದಿಯಿದು. ಈತ ಅಧ್ಯಾಪಕನಾಗಿದ್ದ ಎಂಬುದು ಇನ್ನಷ್ಟು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
-ಶಿಕ್ಷಕನಾಗಿ ಕೆಲಸಸಿಕ್ಕಾಗಲೇ ಶುರುವಾಗಿತ್ತು ಈ ಚಾಳಿ
- ವರ್ಷಕ್ಕೆ ಮೂರು ಸೆಕ್ಸ್ ಟೂರ್ ಮಾಡುತ್ತಿದ್ದನಂತೆ
ಟೋಕಿಯೋ: ಜಗತ್ತು ಕಂಡ ಅತ್ಯಂತ ಅಸಹ್ಯಕರ ವಿಕೃತಕಾಮಿಯೊಬ್ಬನ ಸುದ್ದಿಯಿದು. ಈತ ಅಧ್ಯಾಪಕನಾಗಿದ್ದ ಎಂಬುದು ಇನ್ನಷ್ಟು ಬೇಸರದ ಸಂಗತಿ.
ಒಬ್ಬ ಮನುಷ್ಯ ಜೀವಮಾನದಲ್ಲಿ 12ಸಾವಿರ ಮಹಿಳೆ ಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಬಹುದೇ? ಈ ಕಾರಣಕ್ಕೆ ಫಿಲಿಪೈನ್ಸ್ನ ಈ ಮಾಜಿ ಶಿಕ್ಷಕ ಸೆರೆಮನೆಯಲ್ಲಿದ್ದಾನೆ. ಯೂಹಿ ಕ  ಷಿಮಾ(65) ಶಿಕ್ಷೆಗೆ ಗುರಿಯಾದವ. ಆತ ಸೆರೆಯಾದ ಮೇಲೆಯೇ ಆತನ ಪುರಾಣ ಬಯಲಾದದ್ದು. ಈ ಬಾರಿ ಸಿಕ್ಕಿಬಿದ್ದದ್ದು ಶಾಲಾ ಬಾಲಕಿಯೊಬ್ಬಳ ನಗ್ನ ಫೋಟೋ ಬಹಿರಂಗಪಡಿಸಿದ  ಅಪರಾಧಕ್ಕಾಗಿ. ಆನಂತರ ಆತನ ಇತಿಹಾಸಗಳು ಬಯಲಾದ್ದು. ಹಿಂದೊಮ್ಮೆ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಕ್ಕೆ ಜೈಲು ಸೇರಿದ್ದ ಈತ ಇನ್ನೊಮ್ಮೆ ತಪ್ಪು  ಮಾಡುವುದಿಲ್ಲವೆಂದು ಶಿಕ್ಷೆಯಿಂದ ಬಚಾವಾಗಿದ್ದ.
ಆದರೆ ಈ ಬಾರಿ ಸಿಕ್ಕಿಬಿದ್ದಿದ್ದಾನೆ. ಇವನ ಬಳಿ 1.5ಲಕ್ಷದಷ್ಟು ತನ್ನ ರಾಸಲೀಲೆಯ ಚಿತ್ರಗಳಿವೆಯಂತೆ. ಅದನ್ನು 400 ಆಲ್ಬಮ್ ಮಾಡಿ ಕೊಂಡಿದ್ದಾನೆ. 27 ವರ್ಷಗಳಲ್ಲಿ ಈತ 14ರಿಂದ 70ರ  ವಯಸ್ಸಿನ ಒಟ್ಟು 12,000 ಸ್ತ್ರೀಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದನಂತೆ. ತನ್ನ ಈ ಸಾಧನೆಯ ನೆನಪಿಗಾಗಿ ಈತ ಎಲ್ಲವನ್ನೂ ಫೋಟೋ ಆಲ್ಬಮ್ ಮಾಡಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com