
ಪ್ಯಾರಿಸ್: ಮಾಧ್ಯಮ ಪ್ರತಿನಿಧಿಗಳಿಗೆ ಭಾರತವು ಏಷ್ಯಾದಲ್ಲೇ ಅತಿ ಅಪಾಯಕಾರಿ ದೇಶವಾಗಿದ್ದು, ಪ್ರಸಕ್ತ ವರ್ಷ ಇಲ್ಲಿ 9 ಮಂದಿ ಪತ್ರಕರ್ತರನ್ನು ಹತ್ಯೆಗೈಯ್ಯಲಾಗಿದೆ. ಹೀಗೆಂದು ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್(ಆರ್‍ಎಸ್‍ಎಸ್ )ನ ವಾರ್ಷಿಕ ವರದಿ ಹೇಳಿದೆ.
2015ರಲ್ಲಿ ವಿಶ್ವಾದ್ಯಂತ 110 ಪತ್ರಕರ್ತರು ಕೊಲೆಯಾಗಿದೆ. ಯುದ್ಧಪೀಡಿತ ದೇಶಗಳಾದ ಇರಾಕ್ ಮತ್ತು ಸಿರಿಯಾಗಳಲ್ಲಿ ಕ್ರಮವಾಗಿ 11 ಮತ್ತು 10 ಪತ್ರಕರ್ತರ ಕೊಲೆಯಾಗಿದೆ. ಆದರೆ, ಅಚ್ಚರಿಯೆಂದರೆ, ಶಾಂತಿಯುತ ದೇಶವೆಂದೇ ಪರಿಗಣಿಸಲಾಗಿರುವ ಭಾರತದಲ್ಲಿ 9 ಮಂದಿ ಪತ್ರಕರ್ತರನ್ನು ಹತ್ಯೆಗೈಯ್ಯಲಾಗಿದೆ ಎಂದೂ ವರದಿ ಹೇಳಿದೆ. ಪತ್ರಕರ್ತರ ರಕ್ಷಣೆಗೆ ವಿಶ್ವಸಂಸ್ಥೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ವರದಿಯಲ್ಲಿ ಒತ್ತಾಯಿಸಲಾಗಿದೆ.
Advertisement