ಇಂದಿನಿಂದ ಭಾರತಕ್ಕೆ ಬ್ರಿಟನ್ ನೆರವು ಸ್ಥಗಿತ

ಬ್ರಿಟನ್ ನೀಡುತ್ತಿದ್ದ ಸಾಗರೋತ್ತರ ಆರ್ಥಿಕ ನೆರವಿಗೆ ಭಾರತ ಹಲವು ದಶಕಗಳಿಂದಲೂ ಬಹುದೊಡ್ಡ ಫಲಾನುಭವಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಬ್ರಿಟನ್ ನೀಡುತ್ತಿದ್ದ ಸಾಗರೋತ್ತರ ಆರ್ಥಿಕ ನೆರವಿಗೆ ಭಾರತ ಹಲವು ದಶಕಗಳಿಂದಲೂ ಬಹುದೊಡ್ಡ ಫಲಾನುಭವಿ ರಾಷ್ಟ್ರವಾಗಿತ್ತು. ಆದರೆ, ಈ ನೆರವನ್ನು ಬ್ರಿಟನ್ ಸರ್ಕಾರ ಶುಕ್ರವಾರದಿಂದ ನಿಲ್ಲಿಸಿದೆ.
ಭಾರತ ಕಳೆದ ಕೆಲ ದಶಕಗಳಲ್ಲಿ ಭಾರಿ ಪ್ರಗತಿ ಸಾಧಿಸಿದೆ. ಅಭಿವೃದ್ಧಿ ಕಾರ್ಯಗಳಿಗೆ, ಬಾಹ್ಯಾಕಾಶ ಸಂಶೋಧನೆಗೆ ಭಾರಿ ಹಣ ವ್ಯಯಿಸುತ್ತಿದೆ. ವಿಶ್ವದ ಆಗರ್ಭ ಶ್ರೀಮಂತರು ಅಲ್ಲಿದ್ದಾರೆ. ಹೀಗಿರುವಾಗ ಆರ್ಥಿಕ ನೆರವು ನೀಡುವುದು ಸರಿಯಲ್ಲ ಎಂದು 2012ರಲ್ಲೇ ಅಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. 
ಈ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ 2012ರಲ್ಲೇ ಕೈಗೊಂಡ ನಿರ್ಧಾರದಂತೆ, ಜ.1ರಿಂದ ಭಾರತಕ್ಕೆ ಬ್ರಿಟನ್ ನೆರವು ಸಂಪೂರ್ಣ ನಿಲ್ಲಲಿದೆ. ಆದರೆ, ಖಾಸಗಿ ಕ್ಷೇತ್ರದಲ್ಲಿನ ಹೂಡಿಕೆ ಮತ್ತು ಮಾಹಿತಿ ವಿನಿಮಯ ಮಾತ್ರ ಎಂದಿನಂತೆ ಮುಂದುವರಿಯಲಿದೆ ಎಂದು ಆ ದೇಶ ಸ್ಪಷ್ಟಪಡಿಸಿದೆ.
ಈ ಹಿಂದೆ ಭಾರತಕ್ಕೆ ಒದಗಿಸಲಾಗಿದ್ದನೆರವು ಮತ್ತು ತಾಂತ್ರಿಕ ಸಹಕಾರವನ್ನು ಈ ಮೂರು ವರ್ಷಗಳಲ್ಲಿ ಬ್ರಿಟನ್ ಪೂರ್ಣಗೊಳಿಸಿದೆ. ಜಾರಿಯಲ್ಲಿದ್ದ ಕಾರ್ಯಕ್ರಮಗಳು, ಆರ್ಥಿಕ ಸಹಕಾರವನ್ನು ಪೂರ್ಣಗೊಳಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. 
ಅವು ಈಗ ಮುಕ್ತಾಯಗೊಂಡಿವೆ. ಅದರಂತೆ ಭಾರತಕ್ಕೆ ಆರ್ಥಿಕ ನೆರವು ನಿಲ್ಲಿಸಲಾಗಿದೆ. ಆದರೆ, ಖಾಸಗಿ ಕ್ಷೇತ್ರದ ತಾಂತ್ರಿಕ ಸಹಕಾರಕ್ಕೆ ಸಂಬಂಧಿಸಿ, ಕೌಶಲ್ಯ ವಿನಿಮಯ ಪರಿಣತಿ, ಹೂಡಿಕೆ ಮಾತ್ರ ಈ ಹಿಂದಿನಂತೇ ಮುಂದುವರಿಯಲಿದೆ ಎಂದು ಬ್ರಿಟನ್ ಸಂಸತ್ ನಲ್ಲಿ ಘೋಷಿಸಲಾಗಿದೆ.
ಕಡಲೆ ಬೀಜದ ನೆರವು: ಬ್ರಿಟನ್ ಸರ್ಕಾರ ಭಾರತಕ್ಕೆ ನೀಡುತ್ತಿದ್ದ ನೆರವನ್ನು ಭಾರತದ ಅಂದಿನ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು ಅದು ಕಡೆಲೆ ಬೀಜದಷ್ಟು ನೆರವು ಎಂದು ವ್ಯಂಗ್ಯವಾಡಿದ್ದರು. ಭಾರತ ತನ್ನ ಯೋಜನೆಗಳಿಗೆ, ಅಭಿವೃದ್ಧಿಗೆ ವಿನಿಯೋಗಿಸುವ ಮೊತ್ತಕ್ಕೆ ಹೋಲಿಸಿಕೊಂಡರೆ, ಬ್ರಿಟನ್ ನೀಡುತ್ತಿರುವ ನೆರವು ಕಡಲೇ ಬೀಜದಷ್ಟು ಅಷ್ಟೇ ಎಂದು ಅವರು ಹೇಳಿದ್ದರು. ಈ ಹೇಳಿಕೆ ಬ್ರಿಟನ್ ನಲ್ಲಿ ಭಾರಿ ಪ್ರತಿಭಟನೆಗೂ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com