ಎಲ್ಲೀ ಫಾರ್ಮರ್ (ಕೃಪೆ: ಫೇಸ್ಬುಕ್ )
ಎಲ್ಲೀ ಫಾರ್ಮರ್ (ಕೃಪೆ: ಫೇಸ್ಬುಕ್ )

20 ತಿಂಗಳ ಮಗು ರಾಕ್ ಕ್ಲೈಂಬಿಂಗ್ ಪ್ರಾಕ್ಟೀಸ್ ಮಾಡಿದ್ದು ನೋಡಿದ್ದೀರಾ?

ಸರಿಯಾಗಿ ಹೆಜ್ಜೆಯಿಟ್ಟು ನಡೆಯುವ ಮುನ್ನವೇ ಗೋಡೆ ಹತ್ತುತ್ತಿರುವ ಮಗುವನ್ನು ನೋಡಿದ್ದೀರಾ? ಅಚ್ಚರಿಯಾಗಬಹುದು!!

ಸರಿಯಾಗಿ ಹೆಜ್ಜೆಯಿಟ್ಟು ನಡೆಯುವ ಮುನ್ನವೇ ಗೋಡೆ ಹತ್ತುತ್ತಿರುವ ಮಗುವನ್ನು ನೋಡಿದ್ದೀರಾ? ಅಚ್ಚರಿಯಾಗಬಹುದು!! ಆದರೆ ಇದು ನಿಜ. ಅರಿಜೋನಾದ ಎಲ್ಲೀ ಫಾರ್ಮರ್ ಎಂಬ 20 ತಿಂಗಳ ಬಾಲೆ ರಾಕ್ ಕ್ಲೈಂಬಿಂಗ್ಗೆ ಪ್ರಾಕ್ಟೀಸ್ ಮಾಡುವಂತೆ ಗೋಡೆಗೆ ಹತ್ತುತ್ತಿರುವ ವೀಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.

20 ತಿಂಗಳ ಬಾಲೆ ಈ ರೀತಿ ಗೋಡೆ ಹತ್ತಲು ಅದ್ಹೇಗೆ ಸಾಧ್ಯ? ಇದಕ್ಕೂ ಕಾರಣವುಂಟು. ಎಲ್ಲೀ ಫಾರ್ಮರ್ ನ ಅಪ್ಪ ಅಮ್ಮ ವೃತ್ತಿಪರ ಕ್ಲೈಂಬರ್ಸ್ ಆಗಿದ್ದಾರೆ.  ಎಲ್ಲೀ ಗರ್ಭದಲ್ಲಿರುವಾಗಲೇ ಆಕೆ ಅಮ್ಮ ರಾಚೆಲ್ ರಾಕ್ ಕ್ಲೈಂಬಿಂಗ್ ಮಾಡುತ್ತಿದ್ದರಂತೆ. ಗರ್ಭಿಣಿಯಾಗಿರುವ ರಾಚೆಲ್ ರಾಕ್ ಕ್ಲೈಂಬಿಂಗ್ ಮಾಡುತ್ತಿರುವ ಫೋಟೋ ಕೂಡಾ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.  ಎಲ್ಲೀ ಹುಟ್ಟುವ ಮೂರು ದಿನಕ್ಕೆ ಮುನ್ನವೂ ರಾಚೆಲ್ ರಾಕ್ ಕ್ಲೈಂಬಿಂಗ್ ಮಾಡಿದ್ದಾರೆ ಎಂದರೆ ನೀವು ಅದನ್ನು ನಂಬಲೇ ಬೇಕು.




ನಮ್ಮ ಮಗಳು ನಮ್ಮಂತೆಯೇ ರಾಕ್ ಕ್ಲೈಂಬರ್ ಆಗುತ್ತಾಳೆ ಎಂಬ ಆಶಾವಾದ ಹೊಂದಿದ್ದರೆ ಎಲ್ಲೀ ಅಪ್ಪ ಜಾಕ್ ಫಾರ್ಮರ್. ಆಕೆಗೆ ಬಾಲ್ಯದಲ್ಲೇ ಎಲ್ಲವನ್ನೂ ಕಲಿಸುವುದಕ್ಕಾಗಿ ಬೆಡ್ ರೂಮಿನಲ್ಲಿ 8 ಅಡಿ ಎತ್ತರದ ಗೋಡೆಗೆ ಪುಟ್ಟ ಪುಟ್ಟ ಹಿಡಿಗಳನ್ನಿರಿಸಿ ರಾಕ್ ಕ್ಲೈಂಬಿಂಗ್ ತರಬೇತಿ ನೀಡಲಾಗುತ್ತಿದೆ. ಮಗು ಗೋಡೆ ಹತ್ತುವಾಗ ಬಿದ್ದರೆ ನೋವಾಗದಂತೆ ಕೆಳಗೆ ವ್ಯವಸ್ಥೆ ಮಾಡಿದ್ದರೂ, ಬೀಳುವಾಗ ಹಿಡಿಯುವುದಿಲ್ಲ. ಯಾಕೆಂದರೆ ಹತ್ತುವಾಗ ಬೀಳುವುದು ಸಹಜ, ಅದು ಕ್ಲೈಂಬಿಂಗ್ನ ಒಂದು ಭಾಗವಾಗಿದೆ ಎನ್ನುತ್ತಾರೆ ರಾಚೆಲ್ - ಜಾಕ್ ದಂಪತಿ.

ಎಲ್ಲೀ ಗೋಡೆ ಹತ್ತುತ್ತಿರುವ ವೀಡಿಯೋ ಈಗಾಗಲೇ ಫೇಸ್ಬುಕ್ನಲ್ಲಿ ಸಂಚಲನ ಸೃಷ್ಟಿಸಿದೆ. ದ ಲಿಟ್ಲ್ ಜೆನ್ ಮಂಕೀ  (https://www.facebook.com/LittleZenMonkey?fref=ts) ಎಂಬ ಫೇಸ್ಬುಕ್ ಪೇಜ್ನಲ್ಲಿ ಎಲ್ಲೀ ಎಂಬ ಈ ಬಾಲೆಯ ಎಲ್ಲ ಚಟುವಟಿಕೆಗಳನ್ನು ಅಪ್ಡೇಟ್ ಮಾಡಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com