ಮೂವರು ಅಪ್ರಾಪ್ತರೊಂದಿಗೆ ದೈಹಿಕ ಸಂಪರ್ಕ: ಫ್ಲೋರಿಡಾ ಶಿಕ್ಷಕಿಗೆ 22 ವರ್ಷ ಜೈಲು ಶಿಕ್ಷೆ

ತನ್ನ ಮೂವರು ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದ ಶಿಕ್ಷಕಿಗೆ 22 ವರ್ಷ ಜೈಲು ಶಿಕ್ಷೆ ವಿಧಿಸಿರುವ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ...
ಜೆನಿಫರ್ ಪಿಚರ್
ಜೆನಿಫರ್ ಪಿಚರ್

ಫ್ಲೋರಿಡಾ: ತನ್ನ ಮೂವರು ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದ ಶಿಕ್ಷಕಿಗೆ 22 ವರ್ಷ ಜೈಲು ಶಿಕ್ಷೆ ವಿಧಿಸಿರುವ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ.

30 ವರ್ಷದ ಜೆನಿಫರ್ ಪಿಚರ್ ಎಂಬ ಇಂಗ್ಲೀಷ್ ಶಿಕ್ಷಕಿ ತನ್ನ ಮೂವರು 17 ವರ್ಷದ ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ದೈಹಿಕ ಸಂಪರ್ಕ ಹೊಂದಿದ್ಧಳು. ನಂತರ ಒಬ್ಬ ವಿದ್ಯಾರ್ಥಿಯಿಂದ ಗರ್ಭಿಣಿಯಾದ ಜೆನಿಫರ್ ಗರ್ಭಪಾತ ಮಾಡಿಸಿಕೊಂಡಿದ್ದಾಳೆ.

ಫ್ಲೋರಿಡಾದ ರಾಬಿನ್ ಸನ್ ವುಡ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಜೆನಿಫರ್ ಪೋಕ್  ಕೌಂಟ್ ಕೋರ್ಟ್ ನಲ್ಲಿ ತಪ್ಪೊಪ್ಪಿಕೊಂಡಿದ್ದಾಳೆ. ತನ್ನ ಸ್ವಾರ್ಥಕ್ಕೆ ಬಲಿಯಾದ ಮೂವರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಬಳಿ ಕಣ್ಣೀರು ಹಾಕಿ ಕ್ಷಮಾಪಣೆ ಕೇಳಿದ್ದಾಳೆ. ತನ್ನ ಮೂವರು ವಿದ್ಯಾರ್ಥಿಗಳ ಜೊತೆ 7 ತಿಂಗಳಲ್ಲಿ 37 ಭಾರಿ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಜೆನಿಫರ್ ಹೇಳಿದ್ದಾಳೆ. ತಾನು ಮಾಡಿದ ತಪ್ಪಿನ ಅರಿವಾಗಿದ್ದು ತನ್ನನ್ನು ತಾನು ದ್ವೇಷಿಸುವುದಾಗಿ ಹೇಳಿಕೊಂಡಿದ್ದಾಳೆ. ತನ್ನ ಮಾಜಿ ವಿದ್ಯಾರ್ಥಿಗಳಿಗೆ ತನ್ನ ಕೆಟ್ಟ ನಡವಳಿಕೆಯಿಂದ ಆಗಿರುವ ಅನಾಹುತದಿಂದ ತಾನು ನೊಂದಿರುವುದಾಗಿ ಹೇಳಿದ್ದಾಳೆ.

ಜೆನಿಫರ್ ತಂದೆ ತನ್ನ ಮಗಳಿಗೆ ನೀಡಿರುವ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆದರೆ ಶಿಕ್ಷಕಿಯನ್ನು ನರಭಕ್ಷಕಿ ಎಂದು ಮೂದಲಿಸಿದ ನ್ಯಾಯಾಲಯ ಶಿಕ್ಷೆ ಪ್ರಮಾಣ ಕಡಿಮೆ ಮಾಡಲಾಗದು ಎಂದು ಹೇಳಿ ಮನವಿಯನ್ನು ತಳ್ಳಿ ಹಾಕಿದೆ.

ಮೂವರು ಅಪ್ರಾಪ್ತ ಜೊತೆ ಲೈಂಗಿಕ ಕ್ರಿಯೆ, ಜೊತೆಗೆ ಗರ್ಭಪಾತ ಸೇರಿದಂತೆ ವಿವಿಧ ಪ್ರಕರಣಗಳ ಸಂಬಂಧ ಜೆನಿಫರ್ ಗೆ ನ್ಯಾಯಾಲಯ 22 ವರ್ಷ ಸೆರೆವಾಸ ವಿಧಿಸಿ, ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಹೆಚ್ಚಿನ ಸಮಯ ನೀಡಲಾಗಿದೆ. ಅ ಅವಧಿಯಲ್ಲಿ ನಿನ್ನಲ್ಲಿ ಅನೇಕ ಬದಲಾವಣೆಯಾಗಿ ನೀನು ವಿಭಿನ್ನ ವ್ಯಕ್ತಿಯಾಗಲಿದ್ದೀಯಾ ಎಂದು ತಿಳಿಸಿದೆ.

ಅಪ್ರಾಪ್ತನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕಳೆದ ಏಪ್ರಿಲ್ ನಲ್ಲಿ ಜೆನಿಫರ್ ಥನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿ ತನ್ನ ಮಗನ ಮೊಬೈಲ್ ನಲ್ಲಿದ್ದ ಸಂದೇಶಗಳನ್ನು ನೋಡಿ ಅನುಮಾನಗೊಂಡು ಜೆನಿಫರ್ ಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಜೆನಿಫರ್ ಪಿಚರ್ ತಾನು ಮಾಡಿದ ದುಷ್ಕೃತ್ಯದ ಬಗ್ಗೆ ವಿವರಿಸಿದ್ದಾಳೆ.

ತನಗೆ ವಿಧಿಸಿರುವ 22 ವರ್ಷದ ಶಿಕ್ಷೆ ಸಂಬಂಧ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶವಿದೆ. ಆದರೆ ಯಾವುದೇ ಕಾರಣಕ್ಕೂ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com