
ನವದೆಹಲಿ: ರಷ್ಯಾ ರಾಷ್ಟ್ರಾಧ್ಯಕ್ಷ ವ್ಲಾಡಿಮರ್ ಪುಟಿನ್ ಜುಡೋ ನಲ್ಲಿ ಬ್ಲ್ಯಾಕ್ ಬೆಲ್ಟ್ ಪ್ರವೀಣ ಆದರೆ ಅವರಿಗೆ ಯೋಗದ ಜೊತೆ ಪ್ರಯೋಗ ಮಾಡಲು ಆಸೆಯಾಗಿದೆಯಂತೆ. ಯೋಗ ಮಾಡುವ ಪ್ರಯತ್ನ ಮಾಡುವುದಾಗಿ ಪುಟಿನ್ ನರೇಂದ್ರ ಮೋದಿ ಅವರಿಗೆ ವಚನ ನೀಡಿದ್ದಾರೆ.
"ಯೋಗದ ಆಕರ್ಷಣೆಗೆ ಮನಸೋಲದೆ ಇರಲು ಕಷ್ಟ ಆದರೂ, ನಾನು ಮಾಡದೇ ಇರುವ ಸಂಗತಿಗಳಲ್ಲಿ ಯೋಗ ಕೂಡ ಒಂದು" ಎಂದು ಪುಟಿನ್ ಅವರು ನರೇಂದ್ರ ಮೋದಿಗೆ ರಷ್ಯಾ ನಗರ ಉಫಾದಲ್ಲಿನ ಬುಧವಾರದ ಭೇಟಿಯ ವೇಳೆಯಲ್ಲಿ ತಿಳಿಸಿದ್ದಾರಂತೆ.
ಅಂತರಾಷ್ಟ್ರೀಯ ಯೋಗ ದಿನದ ಸಂಭ್ರಮಕ್ಕೆ ಸಹಾಯ ಮಾಡಿದ ರಷ್ಯಾ ನೆರವನ್ನು ಮೋದಿ ನೆನಪಿಸಿಕೊಂಡಿದ್ದಾರಂತೆ.
ಮೋದಿ ಪುಟಿನ್ ಅವರ ೯೦ ನಿಮಿಷದ ಮಾತುಕತೆಯಲ್ಲಿ ಯೋಗ ಕೂಡ ಒಂದು ವಿಷಯವಾಗಿತ್ತು ಎಂದು ತಿಳಿಸಿರುವ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ "ನನಗೆ ಯೋಗ ಮಾಡಲು ಬರುವುದಿಲ್ಲ. ನೀವು ಮಾಡುವುದನ್ನು ನೋಡಿದಾಗ ಅದು ಬಹಳ ಕಷ್ಟ ಎಂದೆನಿಸುತ್ತದೆ. ಆದುದರಿಂದ ನಾನಿನ್ನೂ ಪ್ರಯತ್ನಿಸಿಲ್ಲ" ಎಂದು ಪುಟಿನ್ ಅವರು ಮೋದಿ ಅವರಿಗೆ ಹೇಳಿದರು ಎಂದು ಅವರು ತಿಳಿಸಿದ್ದಾರೆ.
ಯೋಗದ ಹೊರತಾಗಿ ನಾಗರಿಕ ಅಣು ಸಹಕಾರ ಮುಂತಾದ ವಿಷಯಗಳನ್ನು ಇಬ್ಬರೂ ನಾಯಕರು ಚರ್ಚಿಸಿದರು ಎಂದು ತಿಳಿದುಬಂದಿದೆ.
Advertisement