ಚೀನಾದಲ್ಲಿ ಭೀಕರ ಚಂಡಮಾರುತ ನಿರೀಕ್ಷೆ:8 ಲಕ್ಷ ಜನ ಸ್ಥಳಾಂತರ

ಚೀನಾ ದೇಶದಲ್ಲಿ ಭೀಕರ ಚಂಡಮಾರುತ ಎದುರಾಗುವ ಸಾಧ್ಯತೆಯಿದ್ದು, 8 ಲಕ್ಷಕ್ಕೂ ಅಧಿಕ ನಾಗರಿಕರನ್ನು ದೇಶದ ಪೂರ್ವ ಕರಾವಳಿ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ...
ಚೀನಾಕ್ಕೆ ಬಂದಪ್ಪಳಿಸಿರುವ ಚನ್-ಹೋಂ ಚಂಡಮಾರುತ
ಚೀನಾಕ್ಕೆ ಬಂದಪ್ಪಳಿಸಿರುವ ಚನ್-ಹೋಂ ಚಂಡಮಾರುತ

ಬೀಜಿಂಗ್: ಚೀನಾ ದೇಶದ ಪೂರ್ವ ಕರಾವಳಿ ಭಾಗಕ್ಕೆ ಭೀಕರ ಚನ್-ಹೋಂ ಚಂಡಮಾರುತ ಬಂದಪ್ಪಳಿಸುವ ಸಾಧ್ಯತೆಯಿರುವುದರಿಂದ 8 ಲಕ್ಷಕ್ಕೂ ಅಧಿಕ ನಾಗರಿಕರನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಚನ್-ಹೋಂ ಚಂಡಮಾರುತದಿಂದಾಗಿ ಮುಂದಿನ 24 ಗಂಟೆಗಳೊಳಗೆ ದಕ್ಷಿಣ ಶಾಂಫೈಯಲ್ಲಿ ಭೂ ಕುಸಿತವುಂಟಾಗುವ ಲಕ್ಷಣಗಳಿವೆ. ಸುಮಾರು 400 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಗಾಳಿ ಗಂಟೆಗೆ 187 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ಬಿಬಿಸಿ ವರದಿ ಹೇಳಿದೆ.

ಫಿಲಿಪೈನ್ಸ್ ನಲ್ಲಿ ಈ ವಾರದ ಆರಂಭದಲ್ಲಿ ಬೀಸಿದ ಬಿರುಗಾಳಿಗೆ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದರು. ತೈವಾನ್ ಮತ್ತು ಜಪಾನ್ ನಲ್ಲಿ ಅನೇಕ ಮಂದಿ ಗಾಯಗೊಂಡಿದ್ದರು.
ಚನ್ ಹೂಮ್ ಚಂಡಮಾರುತ 1949ರಿಂದ ಚೀನಾ ದೇಶಕ್ಕೆ ಅಪ್ಪಳಿಸುತ್ತಿರುವ ಬ ಹಳ ಕೆಟ್ಟ ತೂಫಾನು ಆಗಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com