ಬ್ರಿಟನ್‍ನಲ್ಲಿ ಶೀಘ್ರವೇ ವಾಟ್ಸ್ ಆ್ಯಪ್ ನಿಷೇಧ

ಬ್ರಿಟನ್‍ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಾಟ್ಸ್ಆ್ಯಪ್ ಗೆ ನಿರ್ಬಂಧ ಬೀಳಲಿದೆ. ವಾಟ್ಸ್ಆ್ಯಪ್ ಮಾತ್ರವಲ್ಲ, ಮೆಸೇಜ್ ಸೇವೆ ಒದಗಿಸುವ ಆ್ಯಪ್
ವಾಟ್ಸ್ಆ್ಯಪ್
ವಾಟ್ಸ್ಆ್ಯಪ್

ಲಂಡನ್: ಬ್ರಿಟನ್‍ನಲ್ಲಿ ಇನ್ನು ಕೆಲವೇ ದಿನಗಳಲ್ಲಿ  ವಾಟ್ಸ್ಆ್ಯಪ್ ಗೆ ನಿರ್ಬಂಧ ಬೀಳಲಿದೆ.  ವಾಟ್ಸ್ಆ್ಯಪ್ ಮಾತ್ರವಲ್ಲ, ಮೆಸೇಜ್ ಸೇವೆ ಒದಗಿಸುವ ಆ್ಯಪ್ ಗಳಾದ ಐ ಮೆಸೇಜ್, ಸ್ನ್ಯಾಪ್‍ಚಾಟ್ ಕೂಡ ಈ ನಿಷೇಧಿತ ಪಟ್ಟಿ ಸೇರಲಿವೆ. ಇದು ಸ್ನೂಪರ್ಸ್ ಚಾರ್ಟ್ ನೀಡಿದ ವರದಿಯ ಪರಿಣಾಮ ಎನ್ನಲಾಗುತ್ತಿದೆ. ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮ ರೂನ್ ಈಗಾಗಲೇ ಈ 3 ಮೆಸೇಜ್ ಸರ್ವಿಸ್‍ಗೆ ನಿಷೇಧ ಘೋಷಿಸಿದ್ದು, ಒಂದೆ ರಡು ವಾರಗಳಲ್ಲಿ ಅಧಿಕೃತ ನಿಷೇಧಜಾರಿಯಾಗಲಿದೆ. ವಾಟ್ಸ್ಆ್ಯಪ್ ಅತ್ಯಂತ ಅಸುರಕ್ಷಿತ ಆ್ಯಪ್ ಎಂದೂ, ಅದರಲ್ಲಿ ಖಾಸಗಿ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಕಳೆದ ವಾರ ವರದಿ ಬಂದಿರುವ ಬೆನ್ನಲ್ಲಿ ಬ್ರಿಟನ್ ಎಚ್ಚೆತ್ತುಕೊಂಡು ನಿಷೇಧಕ್ಕೆ ಮುಂದೆ ಬಂದಿದೆ. ಈ ಬಗ್ಗೆ ಕ್ಯಾಮರೂನ್ ಸಂಸತ್ತಿ ನಲ್ಲಿಯೂ ಸೂಚಿಸಲಿದ್ದಾರೆ. ಖಾಸಗಿ ಮಾಹಿತಿ ಹೊರತೆಗೆಯುವುದು ಅತ್ಯಂತ ಸುಲಭವಾಗಿದ್ದು, ಇಂಥ ಆ್ಪ್  ಬಳಕೆ ಯಾರಿಗೂ ಬೇಕಿಲ್ಲ ಎಂದಿರುವ ಅವರು,
ಈಗಲೇ ವಾಟ್ಸ್‍ಆ್ಯಪ್ ಮೆಸೇಜ್ ಮತ್ತು ಸ್ನ್ಯಾಪ್‍ಚಾಟ್ ಬಳಕೆ ನಿಲ್ಲಿಸಲು ಜನತೆಗೂ ಕಿವಿಮಾತು ಹೇಳಿದ್ದಾರೆ.
ಫೇಸ್‍ಬುಕ್ ನ್ಯೂಸ್‍ಫೀಡ್‍ನಲ್ಲಿ ಮ್ಯೂಸಿಕ್ ವಿಡಿಯೋ: ಇನ್ನು ಮ್ಯೂಸಿಕ್ ವೀಡಿಯೋ  ಫೇಸ್ ಬುಕ್‍ ಫೋಟೋಗಳಿಗಾಗಿ ಯೂಟ್ಯೂಬ್  ಮೇಲೆ ಮಾತ್ರ ಅವಲಂಬಿತವಾಗಬೇಕಿಲ್ಲ. ಸದ್ಯದಲ್ಲೇ ನಲ್ಲಿ ಮ್ಯೂಸಿಕ್ ವಿಡಿಯೋ ಗಳು ನೇರವಾಗಿ ಸಿಗಲಿವೆ. ನ್ಯೂಸ್‍ಫೀಡ್‍ನಲ್ಲಿ ವಿಡಿಯೋ ಕಾಣಿಸಿಕೊಳ್ಳಲಿದ್ದು, ಇದಕ್ಕೆ ತಾಂತ್ರಿಕ ತಯಾರಿ ಗಳು ನಡೆದಿವೆ. ಇದಕ್ಕೆ ಪೂರ್ವಭಾವಿಯಾಗಿ ಕೆಲವು ಪ್ರಮುಖ ರೆಕಾರ್ಡ್ ಕಂಪನಿಗ ಳೊಂದಿಗೆ ಫೇಸ್‍ಬುಕ್  ಮಾತುಕತೆ ನಡೆಸಿರುವ ವರದಿಯಾಗಿದೆ. ಜಾಹೀರಾತು ಮೂಲಕ ಆದಾಯ ಗಳಿಸುವ ಲೆಕ್ಕಾಚಾರದಲ್ಲೇ  ಈ ಒಪ್ಪಂದವಾಗಿದೆ ಎಂಬ ಮಾಹಿತಿಗಳಿದ್ದರೂ ಒಪ್ಪಂದದ ವಿವರಗಳು ಲಭ್ಯವಾಗಿಲ್ಲ. ಈ ಮಧ್ಯೆ ವಾಟ್ಸಾಪ್‍ನಲ್ಲಿ ನೀಡಿ ರುವ ಹೊಸ ಸರ್ಚ್ ಆಯ್ಕೆ  ಪದ್ದತಿ ಬಳಕೆ ದಾರರಿಗೆ ಅನುಕೂಲ ಕಲ್ಪಿಸುವುದಕ್ಕಿಂತ ಹೆಚ್ಚು ಆತಂಕ ಸೃಷ್ಟಿಸಿದೆ. ಕಾಂಟ್ಯಾಕ್ಟ್  ಸರ್ಚ್ ಮಾಡುವ ಆಯ್ಕೆಯಲ್ಲಿ ಅಪ್ ಡೇಟ್ ನೀಡಲಾಗಿದ್ದು, ಇಲ್ಲಿ ವಾಟ್ಸ್ಆ್ಯಪ್‍ನಲ್ಲಿ ಬೇಕಿರುವ ಹೆಸರನ್ನು ಟೈಪ್ ಮಾಡಿದರೆ, ಆ ಹೆಸರಿರುವ ಎಲ್ಲ ಚಾಟ್ ಮೆಸೇಜ್‍ಗಳನ್ನೂ ಒಟ್ಟುಮಾಡಿ ನಮ್ಮ ಮುಂದೆ ತಂದಿಡುತ್ತಿರುವುದು, ಸುರಕ್ಷತೆ ದೃಷ್ಟಿಯಿಂದ ಕೊಂಚ ಆತಂಕ ಸೃಷ್ಟಿಸಿದೆ. ಮೊಬೈಲ್  ಕಳುವಾದ ಸಂದರ್ಭಗಳಲ್ಲಿ ಗೌಪ್ಯ ಮಾಹಿತಿಗಳು ಅಥವಾ ವೈಯಕ್ತಿಕ ಚಾಟ್ ಮಾತುಕತೆಗಳು ಸೋರಿಕೆಯಾಗುವ ಸಾಧ್ಯತೆ ನಿಚ್ಚಳವಾಗಿದ್ದು, ವಾಟ್ಸ್‍ಆ್ಯಪ್ ನಿಂದಲೇ ಜನ ದೂರವಾಗುವ ಯೋಚನೆಗಳೂ ಶುರುವಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com