ಪ್ಯಾರಿಸ್ ನಲ್ಲಿ ನಾಗರೀಕರನ್ನು ಒತ್ತೆಯಾಳಾಗಿರಿಸಿಕೊಂಡ ಬಂದೂಕುಧಾರಿಗಳು

ಪ್ಯಾರಿಸ್ ನಲ್ಲಿ ಒತ್ತೆಯಾಳು ಪ್ರಕರಣ ಮುಂದುವರಿದಿದ್ದು, ಇಲ್ಲಿನ ಪ್ರಿಮಾರ್ಕ್ ಸ್ಟೋರ್ ಮಳಿಗೆ ಮೇಲೆ ದಾಳಿ ಮಾಡಿರುವ ಬಂದೂಕುಧಾರಿಗಳು ಅಂಗಡಿಯಲ್ಲಿದ್ದ 10 ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವುದಾಗಿ ಸೋಮವಾರ...
ಪ್ಯಾರಿಸ್ ನಲ್ಲಿ ನಾಗರೀಕರನ್ನು ಒತ್ತೆಯಾಳಾಗಿರಿಸಿಕೊಂಡ ಬಂದೂಕುಧಾರಿಗಳು (ಸಂಗ್ರಹ ಚಿತ್ರ)
ಪ್ಯಾರಿಸ್ ನಲ್ಲಿ ನಾಗರೀಕರನ್ನು ಒತ್ತೆಯಾಳಾಗಿರಿಸಿಕೊಂಡ ಬಂದೂಕುಧಾರಿಗಳು (ಸಂಗ್ರಹ ಚಿತ್ರ)

ಪ್ಯಾರಿಸ್: ಪ್ಯಾರಿಸ್ ನಲ್ಲಿ ಒತ್ತೆಯಾಳು ಪ್ರಕರಣ ಮುಂದುವರಿದಿದ್ದು, ಇಲ್ಲಿನ ಪ್ರಿಮಾರ್ಕ್ ಸ್ಟೋರ್ ಮಳಿಗೆ ಮೇಲೆ ದಾಳಿ ಮಾಡಿರುವ ಬಂದೂಕುಧಾರಿಗಳು ಅಂಗಡಿಯಲ್ಲಿದ್ದ 10 ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವುದಾಗಿ ಸೋಮವಾರ ತಿಳಿದುಬಂದಿದೆ.

ಇಂದು ಬೆಳಿಗ್ಗೆ 6.30 ರ ಸುಮಾರಿಗೆ ಬಂದೂಕು ಹಿಡಿದು ಬಂದ ಮೂವರು ವ್ಯಕ್ತಿಗಳು ಇದ್ದಕ್ಕಿದ್ದಂತೆ ಅಂಗಡಿಗೆ ನುಗ್ಗಿದ್ದಾರೆ. ನಂತರ ಅಂಗಡಿಯಲ್ಲಿದ್ದವರನ್ನು ಒತ್ತೆಯಾಳುಗಳಾಗಿರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಬಂದೂಕುಧಾರಿಗಳು ಅಂಗಡಿಯಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡುವುದಕ್ಕಾಗಿ ಬಂದಿದ್ದರು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಸ್ಥಳಕ್ಕಾಗಮಿಸಿರುವ ಭದ್ರತಾ ಸಿಬ್ಬಂದಿಗಳು ಸ್ಥಳದಲ್ಲಿ ಕಟ್ಟೆಚ್ಚರ ವಹಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com