ಇರಾನ್ ಜೊತೆಗೆ ಐತಿಹಾಸಿಕ ಪರಮಾಣು ಒಪ್ಪಂದ

12 ವರ್ಷಗಳ ಸುದೀರ್ಘ ಅವಧಿಯ ನಂತರ ಕೊನೆಗೂ ಇರಾನ್, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಚೀನಾ, ರಷ್ಯಾ ಮತ್ತು ಜರ್ಮನಿ ದೇಶಗಳು...
ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್ ಒಪ್ಪಂದದ ಬಳಿಕ ಮಾಧ್ಯಮದವರತ್ತ ಕೈ ಬೀಸಿದರು.
ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್ ಒಪ್ಪಂದದ ಬಳಿಕ ಮಾಧ್ಯಮದವರತ್ತ ಕೈ ಬೀಸಿದರು.

ವಿಯೆನ್ನಾ: 12 ವರ್ಷಗಳ ಸುದೀರ್ಘ ಅವಧಿಯ ನಂತರ ಕೊನೆಗೂ ಇರಾನ್, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಚೀನಾ, ರಷ್ಯಾ ಮತ್ತು ಜರ್ಮನಿ ದೇಶಗಳು ಮಂಗಳವಾರ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ಮಹತ್ವದ ಪರಮಾಣು ಒಪ್ಪಂದಕ್ಕೆ ಬಂದಿವೆ.

ಅಮೆರಿಕ ರಾಜ್ಯ ಕಾರ್ಯದರ್ಶಿ ಮತ್ತು ಇರಾನ್ ನ ಕಾರ್ಯದರ್ಶಿ ನಡುವೆ ಕಳೆದ 17 ದಿನಗಳಿಂದ ಸತತ ಮಾತುಕತೆ ನಡೆಯುತ್ತಿದ್ದು, ಇಂದು ಒಂದು ಒಪ್ಪಂದಕ್ಕೆ ಬಂದಿವೆ. ಅದರ ಪ್ರಕಾರ, ಇರಾನ್ ಇನ್ನು 10 ವರ್ಷಗಳವರೆಗೆ ತನ್ನ ಪರಮಾಣು ಕಾರ್ಯಕ್ರಮಗಳನ್ನು ನಿಲ್ಲಿಸಬೇಕಾಗಿದೆ.

ಇರಾನ್ ನ ವಿದೇಶಾಂಗ ಸಚಿವರು ಮತ್ತು ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥರು ಇಂದು ಸಂಜೆ ಜಂಟಿ ಹೇಳಿಕೆ ನೀಡಿ ಒಪ್ಪಂದದ ಸಂಪೂರ್ಣ ವಿವರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com