ಚೀನಾದಿಂದ ಪಾಕಿಸ್ತಾನಕ್ಕೆ 8 ಜಲಾಂತರ್ಗಾಮಿ ನೌಕೆಗಳ ಪೂರೈಕೆ

ಪಾಕಿಸ್ತಾನ ಚೀನಾದಿಂದ 8 ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಇದರಿಂದ ಪಾಕಿಸ್ತಾನದ ನೌಕಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ಜಲಾಂತರ್ಗಾಮಿ ನೌಕೆ(ಸಂಗ್ರಹ ಚಿತ್ರ)
ಜಲಾಂತರ್ಗಾಮಿ ನೌಕೆ(ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಪಾಕಿಸ್ತಾನ ಚೀನಾದಿಂದ 8 ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಇದರಿಂದ ಪಾಕಿಸ್ತಾನದ ನೌಕಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಪಾಕಿಸ್ತಾನ ಹಣಕಾಸು ಸಚಿವ ಇಷಾಕ್ ದರ್ ಚೀನಾ ಸರ್ಕಾರದ ಹಡಗು ನಿರ್ಮಾಣ ಮತ್ತು ಶೋರ್ ಇಂಟರ್ನ್ಯಾಷನಲ್ ಕಂಪನಿ ಲಿಮಿಟೆಡ್ ನ ಅಧ್ಯಕ್ಷ ಕ್ಸು ಜ್ಹಿಗೀನ್ ಅವರೊಂದಿಗೆ ಜಲಾಂತರ್ಗಾಮಿ ನೌಕೆ ಖರೀದಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪಾಕಿಸ್ತಾನಕ್ಕೆ 8 ಜಲಾಂತರ್ಗಾಮಿ ನೌಕೆಗಳನ್ನು ಪೂರೈಸಲು ಚೀನಾ ಒಪ್ಪಿಗೆ ನೀಡಿದೆ.

ಬೀಜಿಂಗ್ ನಲ್ಲಿ ಉತ್ತನ ಮಟ್ಟದ ಸಭೆ ನಡೆದ ಬಳಿಕ ಪಾಕ್ಸಿತಾನಕೆ ಜಲಾಂತರ್ಗಾಮಿ ನೌಕೆಗಳನ್ನು ಪೂರೈಕೆ ಮಾಡುವ ಬಗ್ಗೆ ಅಂತಿಮ ಒಪ್ಪಂದಕ್ಕೆ ಉಭಯ ರಾಷ್ಟ್ರಗಳ ನಾಯಕರು ಸಹಿ ಹಾಕಲಿದ್ದಾರೆ ಎಂದು ಹೇಳಲಾಗಿದೆ.

ನಾಲ್ಕು ಕಂತುಗಳಲ್ಲಿ ಪಾಕಿಸ್ತಾನ ಚೀನಾಗೆ ಹಣ ಪಾವತಿ ಮಾಡಲಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಚೀನಾ ಪಾಕ್ ಗೆ 8 ಜಲಾಂತರ್ಗಾಮಿ ನೌಕೆಗಳನ್ನು ಪೂರೈಕೆ ಮಾಡಲಿದೆ. ಸಿ.ಎಸ್.ಒ.ಸಿ ನಿಯೋಗ ಪಾಕಿಸ್ತಾನಕ್ಕೆ ಭೇಟಿನೀಡಿರುವುದರಿಂದ ಚೀನಾ-ಪಾಕಿಸ್ತಾನದ ದ್ವಿಪಕ್ಷೀಯ ಬಾಂಧವ್ಯ  ವೃದ್ಧಿಯಾಗಲಿದೆ ಎಂದು ಪಾಕಿಸ್ತಾನ ಹಣಕಾಸು ಸಚಿವ ಇಷಾಕ್ ದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

ಏಪ್ರಿಲ್ ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಪಾಕ್ ಗೆ 8 ಜಲಾಂತರ್ಗಾಮಿ ನೌಕೆಗಳನ್ನು ನಿಡುವ ಬಗ್ಗೆ ಚರ್ಚೆ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com