ಹಖ್ಖಾನಿ ನೆಟ್‍ವರ್ಕ್ ಮುಖ್ಯಸ್ಥ ಸಾವು

ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಪ್ರಜೆಗಳ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಉಗ್ರ ಸಂಘಟನೆ ಹಖ್ಖನಿ ಗುಂಪಿನ ಮುಖ್ಯಸ್ಥ ಜಲಾಲುದ್ದೀನ್ ಹಖ್ಖಾನಿ ಮೃತಪಟ್ಟಿರುವ ವಿಚಾರ ಬಹಿರಂಗವಾಗಿದೆ...
ಉಗ್ರ ಮುಖಂಡ ಜಲಾಲುದ್ದೀನ್ ಹಖ್ಖಾನಿ (ಸಂಗ್ರಹ ಚಿತ್ರ)
ಉಗ್ರ ಮುಖಂಡ ಜಲಾಲುದ್ದೀನ್ ಹಖ್ಖಾನಿ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಪ್ರಜೆಗಳ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಉಗ್ರ ಸಂಘಟನೆ ಹಖ್ಖನಿ ಗುಂಪಿನ ಮುಖ್ಯಸ್ಥ ಜಲಾಲುದ್ದೀನ್ ಹಖ್ಖಾನಿ ಮೃತಪಟ್ಟಿರುವ ವಿಚಾರ ಬಹಿರಂಗವಾಗಿದೆ.

ಈತ ವರ್ಷದ ಹಿಂದೆಯೇ ಅನಾರೋಗ್ಯದಿಂದ ಮೃತ ಪಟ್ಟಿದ್ದ ಎಂದು ಮೂಲಗಳು ತಿಳಿಸಿವೆ. ಹಖ್ಖನಿ ಗುಂಪು ಆಫ್ಘನ್‍ನಲ್ಲಿರುವ ಪಾಶ್ಚಿಮಾತ್ಯ ಹಾಗೂ ಭಾರತೀಯ ರಾಯಭಾರ ಕಚೇರಿಗಳ ಮೇಲೆ ನಡೆದ ದಾಳಿಗಳಲ್ಲಿ ಪ್ರಮುಖ ಪಾತ್ರವಹಿಸಿತ್ತು. 2008ರಲ್ಲಿ ಕಾಬೂಲ್‍ನ ಭಾರತೀಯ ರಾಯಭಾರ ಕಚೇರಿ ಮೇಲಿನ ದಾಳಿ ಹಿಂದೆಯೂ ಇದರ ಕೈವಾಡ ಇತ್ತು. ಒಮರ್‍ಗೆ ಪಾಕ್‍ನಲ್ಲಿ ಚಿಕಿತ್ಸೆ: ತಾಲಿಬಾನ್ ಮುಖ್ಯಸ್ಥನಾಗಿದ್ದ ಮುಲ್ಲಾ ಒಮರ್‍ಗೆ ಕರಾಚಿಯ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿತ್ತು. ಈತನನ್ನು ಪಾಕ್‍ನ ಹಿಂದಿನ ಅಧ್ಯಕ್ಷ  ಜರ್ದಾರಿ ಭೇಟಿಯಾಗಿದ್ದರು ಎಂದು ವಾಷಿಂಗ್ಟನ್ ಪೊಸ್ಟ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com