ಶಿರಡಿ ಸಾಯಿ ಬಾಬಾ ನಾಣ್ಯ

ಅಪಾರ ಅನುಯಾಯಿಗಳನ್ನು ಹೊಂದಿರುವ ಶಿರಡಿ ಸಾಯಿ ಬಾಬಾ, ಇದೀಗ ವಿದೇಶವೊಂದರ ನಾಣ್ಯದ ಮೇಲೆ ರಾರಾಜಿಸುವ ಸಂದರ್ಭ ಬಂದಿದೆ...
ಶಿರಡಿ ಸಾಯಿಬಾಬಾ (ಸಂಗ್ರಹ ಚಿತ್ರ)
ಶಿರಡಿ ಸಾಯಿಬಾಬಾ (ಸಂಗ್ರಹ ಚಿತ್ರ)

ಕೋಲ್ಕತಾ: ಅಪಾರ ಅನುಯಾಯಿಗಳನ್ನು ಹೊಂದಿರುವ ಶಿರಡಿ ಸಾಯಿ  ಬಾಬಾ, ಇದೀಗ ವಿದೇಶವೊಂದರ ನಾಣ್ಯದ ಮೇಲೆ ರಾರಾಜಿಸುವ ಸಂದರ್ಭ ಬಂದಿದೆ.

ದಕ್ಷಿಣ ಫೆಸಿಫಿಕ್ ಸಾಗರದ ನ್ಯೂಯು ದ್ವೀಪ ಶಿರ್ಡಿ ಸಾಯಿಬಾಬಾ ಹೆಸರಲ್ಲಿ ಹೊಸ ನಾಣ್ಯ ಬಿಡುಗಡೆ ಮಾಡಿದೆ. ಶುಕ್ರವಾರ ಗುರುಪೂರ್ಣಿಮೆ ಅಂಗವಾಗಿ ಬಾಬಾಗೆ ಅಲ್ಲಿನ ಸರ್ಕಾರ ಈ ಉನ್ನತ ಗೌರವ ಸಲ್ಲಿಸಿದ್ದು, ಆ ಮೂಲಕ ಶಿರಡಿ ಬಾಬಾ ಹೆಸರಲ್ಲಿ ವಿಶೇಷ ನಾಣ್ಯ ಬಿಡುಗಡೆ ಮಾಡಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸ್ವಿಸ್‍ನ ಹೆಲ್ವೆಟಿಕ್ ಮಿಂಟ್ ಸಂಸ್ಥೆಯು ನಾಣ್ಯವನ್ನು ಟಂಕಿಸಿದೆ. ಸ್ವಿಸ್ ಹಾಲ್‍ಮಾರ್ಕ್ ಒಳಗೊಂಡ ಬೆಳ್ಳಿ ನಾಣ್ಯದ ಒಂದು ಬದಿ ವರ್ಣಮಯ ಬಾಬಾ ಚಿ ತ್ರ, ಮತ್ತೊಂದು ಬದಿ ಬ್ರಿಟನ್‍ನ ಎರಡನೇ ಎಲಿಜಬೆತ್ ರಾಣಿಯ ಚಿತ್ರವಿದೆ ಎಂದು ಇಲ್ಲಿನ ಸೇವಕ್ ಹವ್ಯಾಸಿ ನಾಣ್ಯ ಸಂಗ್ರಾಹಕರ ವೇದಿಕೆಯ ರವಿ ಸೇವಕ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com