11ರ ಬಾಲಕಿಯಿಂದ ಪಾಸ್‍ವರ್ಡ್ ಉದ್ಯಮ

ಈಕೆಗೆ ಬರೀ 11 ವರ್ಷ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ವಯಸ್ಸು ಚಿಕ್ಕದಾದರೂ ಈಕೆಯ ವ್ಯಾವಹಾರಿಕ ಜ್ಞಾನ ಮಾತ್ರ ದೊಡ್ಡದೇ. ಏಕೆಂದು ಕೇಳುತ್ತಿದ್ದೀರಾ?...
ಭಾರತೀಯ ಬಾಲಕಿ (ಸಂಗ್ರಹ ಚಿತ್ರ)
ಭಾರತೀಯ ಬಾಲಕಿ (ಸಂಗ್ರಹ ಚಿತ್ರ)

ನ್ಯೂಯಾರ್ಕ್: ಈಕೆಗೆ ಬರೀ 11 ವರ್ಷ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ವಯಸ್ಸು ಚಿಕ್ಕದಾದರೂ ಈಕೆಯ ವ್ಯಾವಹಾರಿಕ ಜ್ಞಾನ ಮಾತ್ರ ದೊಡ್ಡದೇ. ಏಕೆಂದು ಕೇಳುತ್ತಿದ್ದೀರಾ?

ಭಾರತೀಯ ಮೂಲದ ಈ ಬಾಲಕಿ ನ್ಯೂಯಾರ್ಕ್‍ನಲ್ಲಿ ತನ್ನದೇ ಆದ ಉದ್ಯಮ ಆರಂಭಿಸಿದ್ದಾಳೆ. ಅದರಲ್ಲಿ ಯಶಸ್ಸನ್ನೂ ಗಳಿಸಿದ್ದಾಳೆ. ಡೈಸ್ ರೋಲ್‍ಗಳಿಂದ ತಯಾರಿಸಲಾದ ಸುರಕ್ಷಿತ ಪಾಸ್‍ವರ್ಡ್‍ಗಳನ್ನು ಮಾರುವುದೇ ಈಕೆಯ ಉದ್ಯಮ. ಹೌದು. ಮೀರಾ ಮೋದಿ ಎಂಬ ಹೆಸರಿನ ಬಾಲಕಿ, ಚಿಕ್ಕ ವಯಸ್ಸಿನಲ್ಲಿಯೇ ಉದ್ದಿಮೆ ವಲಯಕ್ಕಿಳಿದಿದ್ದಾಳೆ. ದಶಕಗಳಿಂದಲೂ ಡೈಸ್ ವೇರ್‍ಗಳನ್ನು ಪಾಸ್‍ವರ್ಡ್ ಸೃಷ್ಟಿಸಲು ಬಳಸಲಾಗುತ್ತದೆ.

ಮೊದಲು, ಡೈಸ್ ಅನ್ನು ಉರುಳಿಸಿ, ಬರುವ ಸಂಖ್ಯೆಯನ್ನು ಇಂಗ್ಲಿಷ್ ಪದಗಳ ದೀರ್ಘ ಪಟ್ಟಿಗೆ ಸೇರಿಸುವುದು. ನಂತರ ಈ ಪದಗಳನ್ನು ನಾನ್-ಸೆನ್ಸಿಕಲ್ ಸ್ಟ್ರಿಂಗ್‍ನೊಂದಿಗೆ ಯೋಜಿಸಲಾಗುತ್ತದೆ. ಈ ಪಾಸ್‍ವರ್ಡ್‍ಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಸುಲಭ. ಆದರೆ, ಹ್ಯಾಕರ್ ಗಳಿಗೆ ಇದನ್ನು ಕಂಡುಹಿಡಿಯುವುದು ಕಷ್ಟ. ಇಂತಹ ಪಾಸ್‍ವರ್ಡ್ ತಯಾರಿಸಿ, ಮಾರುವುದೇ ಮೀರಾಳ ಸೀಕ್ರೆಟ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com