ಫ್ರಾನ್ಸ್ ಏಕೆ ಇಸ್ಲಾಮಿಕ್ ಉಗ್ರರ ಭದ್ರ ನೆಲೆಯಾಗುತ್ತಿದೆ?

ಚಾರ್ಲಿ ಹೆಬ್ಡೊ ಪತ್ರಿಕೆಯ ಮೇಲೆ ಅಲ್-ಖೈದಾ ದಾಳಿ ನಡೆಸಿ 17 ಮಂದಿಯನ್ನು ಕೊಂದುಹಾಕಿದ ಕರಾಳ ನೆನಪು ಮಾಸುವ ಮುನ್ನವೇ ಇನ್ನೊಂದು ಜಿಹಾದಿ ದಾಳಿಯ ಭಯಾನಕತೆಗೆ ಪ್ಯಾರಿಸ್ ತುತ್ತಾಗಿದೆ...
ಪ್ಯಾರಿಸ್ ನಲ್ಲಿ ನಡೆದ ಉಗ್ರರ ದಾಳಿ (ಸಂಗ್ರಹ ಚಿತ್ರ)
ಪ್ಯಾರಿಸ್ ನಲ್ಲಿ ನಡೆದ ಉಗ್ರರ ದಾಳಿ (ಸಂಗ್ರಹ ಚಿತ್ರ)

ಜೇಸನ್ ಬರ್ಕ್: ಚಾರ್ಲಿ ಹೆಬ್ಡೊ ಪತ್ರಿಕೆಯ ಮೇಲೆ ಅಲ್-ಖೈದಾ ದಾಳಿ ನಡೆಸಿ 17 ಮಂದಿಯನ್ನು ಕೊಂದುಹಾಕಿದ ಕರಾಳ ನೆನಪು ಮಾಸುವ ಮುನ್ನವೇ ಇನ್ನೊಂದು ಜಿಹಾದಿ ದಾಳಿಯ  ಭಯಾನಕತೆಗೆ ಪ್ಯಾರಿಸ್ ತುತ್ತಾಗಿದೆ.

ಈ ದುಷ್ಕೃತ್ಯಕ್ಕೆ ಫ್ರಾನ್ಸ್ ಅಧ್ಯಕ್ಷ ಹೊಲಾಂಡ್ ಐಎಸ್ ಉಗ್ರರನ್ನು ಹೊಣೆ ಮಾಡಿದ್ದಾರೆ ಮತ್ತು `ಇದು ಯುದ್ಧಸಮಾನ ಕೃತ್ಯ' ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ `ಸಾವಿನ ವಾಸನೆ  ಆಘ್ರಾಣಿಸುವುದನ್ನು ಮುಂದುವರಿಸುವು'ದಾಗಿ ಐಎಸ್ ಹೇಳಿಕೊಂಡಿದೆ. ಗನ್‍ಧಾರಿ ಗಳಲ್ಲಿ ಕೆಲವರಾದರೂ ಫ್ರೆಂಚರು ಇರುವುದು ನಿಶ್ಚಯ. ಇದು ಮುಸ್ಲಿಂ ಅಲ್ಪಸಂಖ್ಯಾತರಲ್ಲಿ ಹೆಚ್ಚುತ್ತಿರುವ  ಮೂಲಭೂತವಾದ ಹತ್ತಿಕ್ಕಲು ಸರ್ಕಾರದ ಹೆಣಗಾಟವನ್ನು ತೋರಿಸುತ್ತಿದೆ. ಒಂದು ಲೆಕ್ಕಾಚಾರದಂತೆ ಇಸ್ಲಾಮಿಕ್ ಉಗ್ರವಾದಕ್ಕೆ ಯೂರೋಪ್‍ನಲ್ಲಿ ಅತಿ ಹೆಚ್ಚು ಮಂದಿಯ ದೇಣಿಗೆ  ಕೊಟ್ಟಿರುವುದು ಫ್ರಾನ್ಸೇ.

ಫ್ರೆಂಚ್ ಸೆನೆಟ್ ವರದಿ ಪ್ರಕಾರ ಯೂರೋಪಿನ 3000ಕ್ಕೂ ಅಧಿಕ ಜಿಹಾದಿಗಳಲ್ಲಿ 1430 ಮಂದಿ ಫ್ರಾನ್ಸಿನಿಂದಲೇ ಸಿರಿಯಾ, ಇರಾಕ್‍ಗಳಿಗೆ ಹೋಗಿದ್ದಾರೆ. ಬೇಹುಗಾರಿಕೆ ಅಧಿಕಾರಿಗಳು ಇನ್ನೂ  1570 ಮಂದಿಯ ಮೇಲೆ ಸಿರಿಯಾದ ಐಎಸ್ ಉಗ್ರರ ಜತೆ ಒಂದಿಲ್ಲೊಂದು ಸಂಪರ್ಕ ಹೊಂದಿದ್ದಾರೆಂಬ ಸಂಶಯದಲ್ಲಿ ನಿಗಾ ಇಟ್ಟಿದ್ದಾರೆ. ಮತ್ತೂ 7,000 ಮಂದಿ ಇದೇ ಹಾದಿ ತುಳಿಯುವ  ಅಪಾಯದಲ್ಲಿದ್ದಾರೆ ಎಂದು ಎಎಫ್ಪಿ ಹೇಳಿತ್ತು. ಒಂದು ವರದಿಯ ಪ್ರಕಾರ ಸೌದಿ ಅರೇಬಿಯಾ, ಟ್ಯುನೀಸಿಯಾ, ರಷ್ಯಾ, ಜೋರ್ಡಾನ್ ನಿಂದೆಲ್ಲಾ ಒಟ್ಟು ಸೇರಿಸಿದರೆ ಉಗ್ರರಾಗಲು ಹೋದವರ  ಸಂಖ್ಯೆ ಫ್ರಾನ್ಸ್ ನಿಂದ ಹೋದವರ 2 ಪಟ್ಟು ಇರಬಹುದು. ಮುಸ್ಲಿಂ ಮೂಲಭೂತ ವಾದದ ವಿರುದ್ಧ ಸರ್ಕಾರ ಎಷ್ಟೇ ಕಾರ್ಯಾಚರಣೆ ನಡೆಸಿದರೂ, ದೇಶದಲ್ಲಿ 47 ಲಕ್ಷದಷ್ಟಿರುವ, ಒಟ್ಟು  ಜನಸಂಖ್ಯೆಯ ಶೇ.7.5ರಷ್ಟಿರುವ ಮುಸ್ಲಿಮರಲ್ಲಿ ಆ ಕಡೆಗೆ ವಾಲುತ್ತಿರುವವರನ್ನು ತಡೆಯಲಾಗಿಲ್ಲ.

ಶಿಕ್ಷಣ, ಉದ್ಯೋಗ, ವಸತಿ ಕ್ಷೇತ್ರಗಳಲ್ಲಿ ನಿರಂತರ ಕಡೆಗಣನೆಗೊಳಗಾಗುತ್ತಿರುವ ಮುಸ್ಲಿಮರ ಆಕ್ರೋಶ, 2010ರಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಖಾಧಾರಣೆಯ ನಿಷೇಧದಂಥ  ಕ್ರಮಗಳಿಂದ ಇನ್ನಷ್ಟು ಹೆಚ್ಚಾಗಿದೆ. ಫ್ರಾನ್ಸ್ ನಲ್ಲಿ ಉಗ್ರವಾದದ ಮೊದಲ ಬೇರುಗಳು ಅಲ್ಜೀರಿಯಾದಲ್ಲಿ ನಡೆದ ಪ್ರಜಾದಂಗೆ ಯಲ್ಲಿವೆ. 1994ರಲ್ಲಿ ಅಲ್ಜೀರಿಯಾ ಉಗ್ರರು ಏರ್ಫ್ರಾನ್ಸ್ ವಿಮಾನ  ಅಪಹರಿಸಿದ್ದರು. ವರ್ಷದ ನಂತರ ಸಾರ್ವಜನಿಕ ಸಾರಿಗೆಯಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು. ನಂತರದ ದಶಕ ದಲ್ಲಿ ಕೆಲವು ಫ್ರೆಂಚರು ಆಫ್ಘನ್‍ನಲ್ಲಿ ಖೈದಾ ನಡೆಸುವ ಉಗ್ರ ತರಬೇತಿ ಶಿಬಿರ  ಸೇರಿಕೊಂಡಿದ್ದರು. ಲಾಡೆನ್ ಜಿಹಾದಿ ಗುಂಪುಗಳು ಇಲ್ಲಿ ಸಕ್ರಿಯವಾಗಿದ್ದವು. 2005ರಲ್ಲಿ ನಡೆದ ಗುಂಪು ಗಲಭೆಗಳು ಮುಸ್ಲಿಂ ಅಸಹನೆಯ ಫಲ ಎಂದು ವ್ಯಾಖ್ಯಾನಿಸಲಾಗಿತ್ತು.

ಆದರೆ ಆಫ್ಘನ್‍ನಲ್ಲಿ ಹೋಗಿ ಸಾಯುವ ಫ್ರೆಂಚರ ಸಂಖ್ಯೆ ಸಾಕಷ್ಟಿತ್ತು. ಈಜಿಪ್ತ್, ಗಲ್ಫ್ ರಾಷ್ಟ್ರಗಳಿಗೆ ಹೋಗಿ ಧಾರ್ಮಿಕ ವಿದ್ಯಾಭ್ಯಾಸ ಪಡೆಯುವ ತರುಣರ ಸಂಖ್ಯೆ ಹೆಚ್ಚಿದಂತೆ ತಬ್ಲಿ ಘಿ ಜಮಾತ್  ನಂತಹ ಶಾಂತಿಯುತ ಸಂಘಟನೆಗಳ ಪ್ರತಿಭಟನೆಗಳು ಹೆಚ್ಚಿದವು. 2006ರಲ್ಲಿ ಪ್ರವಾದಿ ಮುಹ ಮ್ಮದ್‍ರನ್ನು ವ್ಯಂಗ್ಯಮಾಡಿದ ಕಾರ್ಟೂನ್‍ಗಳಿಗೆ ನಡೆದ ಪ್ರತಿಭಟನೆಗಳೂ  ಶಾಂತಿಯುತವಾಗಿದ್ದವು. 2ನೇ, 3ನೇ ತಲೆಮಾರಿನ ಮುಸ್ಲಿಂ ತರುಣ ರಲ್ಲಿ ಆಲ್ಕೋಹಾಲ್ ಸೇವನೆ, ಮುಸ್ಲಿಮೇತರರ ವಿವಾಹವಾಗುವಿಕೆ ಹೆಚ್ಚಿದ್ದು, ಮಸೀದಿಗೆ ಹೋಗುವಿಕೆ, ಪರ್ದಾಧಾರಣೆ  ಕಡಿಮೆಯಾಗಿದೆ ಎಂದು ಕೆಲ ಸಮೀಕ್ಷೆಗಳು ಹೇಳಿದ್ದವು. 2009-10ರಲ್ಲಿ ಆಂತರಿಕ ಬೆದರಿಕೆಗೆ ಭಯವಿಲ್ಲ ಎಂದು ಫ್ರಾನ್ಸ್ ಅಭಿಪ್ರಾಯಪಟ್ಟಿತ್ತು. ಅದು ಅತಿ ಆತ್ಮವಿಶ್ವಾಸ ಎಂದು ಈಗ ಗೊತ್ತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com